ಕರ್ನಾಟಕ ರಾಜ್ಯ ರ‌್ಯಾಂಕಿಂಗ್ ಸ್ಪೀಡ್ ಸ್ಕೇಟಿಂಗ್‌ನಲ್ಲಿ ಚಿನ್ನ, ಬೆಳ್ಳಿ ಪದಕ

mng- june 17- speed scating
Published on

ಮಂಗಳೂರು: ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ರ‌್ಯಾಂಕಿಂಗ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಸ್ಕೇಟರ್ ಗಳಾದ ಕೇಟ್ ಆರ್ವಿ ವಾಜ್ 1 ಚಿನ್ನ ಮತ್ತು 1 ಬೆಳ್ಳಿ, ಶೀಹನ್ ಎ ಆರ್ 2 ಬೆಳ್ಳಿ ಮತ್ತು ಮೌರ್ಯ ಕಿರಣ್ ಬಂಜನ್ 1 ಬೆಳ್ಳಿ ಪಡೆದಿದ್ದಾರೆ.
ಮಂಗಳೂರಿನ ಹೈ- ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‌ನ ಸದಸ್ಯರಾದ ಈ ಸ್ಕೇಟರ್ ಗಳು ತರಬೇತುದಾರರಾದ ಮೋಹನ್‌ದಾಸ್ ಕೆ ಮತ್ತು ಜಯರಾಜ್ ಅವರಿಂದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net