

ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದ ಸುರಂಗ ಮಾರ್ಗ ನಿರ್ಮಾಣ ಕಾರ್ಯಕ್ಕೆ ಬಿಎಂಆರ್ಸಿಎಲ್ ವೇಗ ನೀಡಿದ್ದು, ಮೊದಲ ಸುರಂಗ ಕೊರೆಯುವ ಕಾರ್ಯ ಆರಂಭಿಸಿದ್ದ ಊರ್ಜಾ ಯಂತ್ರ ಈವರೆಗೆ ಶೇ. 17 ಕಾಮಗಾರಿ ಪೂರ್ಣಗೊಳಿಸಿದೆ.
ನಗರದ ಸಂಚಾರ ದಟ್ಟಣೆ ಸಮಸ್ಯೆ ನೀಗಿಸುವ ಸಲುವಾಗಿ ನಮ್ಮ ಮೆಟ್ರೋ 2ನೇ ಹಂತ ನಿಮಿರ್ಸಲಾಗುತ್ತಿದೆ. ಅದರಲ್ಲಿ ಡೈರಿ ವೃತ್ತದಿಂದ ನಾಗವಾರವರೆಗೆ 14 ಕಿ.ಮೀ. ಉದ್ದದ ಸುರಂಗ ಮಾರ್ಗ ನಿಮಿರ್ಸಲಾಗುತ್ತಿದ್ದು, ಮೊದಲಿಗೆ ಶಿವಾಜಿನಗರದಿಂದ ದಂಡು ನಿಲ್ದಾಣದವರೆಗೆ, ದಂಡು ನಿಲ್ದಾಣದಿಂದ ಟ್ಯಾನರಿ ರಸ್ತೆವರೆಗಿನ ಜೋಡಿ ಸುರಂಗ ಮಾರ್ಗ ನಿರ್ಮಾಣಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ. ಕಳೆದ 4 ತಿಂಗಳಿನಿಂದ ಕೆಲಸ ಮಾಡುತ್ತಿರುವ ಊರ್ಜಾ ಯಂತ್ರ ತನ್ನ ಕಾರ್ಯದಲ್ಲಿ ವೇಗ ಪಡೆದುಕೊಂಡಿದೆ. ಅದರ ಜತೆಗೆ ಅವನಿ ಮತ್ತು ವಿಂಧ್ಯಾ ಯಂತ್ರಗಳು ಸುರಂಗ ಕೊರೆಯುವ ಕೆಲಸ ಮಾಡುತ್ತಿವೆ.
576ರಲ್ಲಿ 100 ರಿಂಗ್ ಅಳವಡಿಕೆ: ಊರ್ಜಾ ಮತ್ತು ವಿಂಧ್ಯಾ ಯಂತ್ರಗಳು ದಂಡು ನಿಲ್ದಾಣದಿಂದ ಶಿವಾಜಿನಗರವರೆಗೆ ಜೋಡಿ ಸುಂಗ ಮಾರ್ಗ ನಿಮಿರ್ಸುತ್ತಿವೆ. ಈ ಎರಡೂ ಯಂತ್ರಗಳು ಸುರಂಗ ಕೊರೆದು ತಲಾ 576 ರಿಂಗ್ಗಳನ್ನು ಅಳವಡಿಸಬೇಕಿದೆ. ಅದರಂತೆ ಮೊದಲಿಗೆ ಕೆಲಸ ಆರಂಭಿಸಿರುವ ಊರ್ಜಾ ಯಂತ್ರ ಈಗಾಗಲೆ 100ಕ್ಕೂ ಹೆಚ್ಚಿನ ರಿಂಗ್ಗಳ ಅಳವಡಿಕೆ ಮಾಡುವಷ್ಟು ಸುರಂಗ ಕೊರೆದಿದ್ದು, ರಿಂಗ್ ಅಳವಡಿಕೆಯೂ ಪೂರ್ಣಗೊಂಡಿದೆ. ಅದರ ಜತೆಗೆ ಅಕ್ಟೋಬರ್ನಲ್ಲಿ ತನ್ನ ಕೆಲಸ ಆರಂಭಿಸಿರುವ ವಿಂಧ್ಯಾ ಯಂತ್ರದ ಕಾರ್ಯದಿಂದ 30ಕ್ಕೂ ಹೆಚ್ಚಿನ ರಿಂಗ್ ಅಳವಡಿಸಲಾಗಿದೆ.
ಉಳಿದಂತೆ ಶಿವಾಜಿನಗರ ಕಡೆಯಿಂದ ಸುರಂಗ ಕೊರೆಯುವ ಕೆಲಸ ಆರಂಭಿಸಿರುವ ಅವನಿ ಯಂತ್ರ 40ಕ್ಕೂ ಹೆಚ್ಚಿನ ರಿಂಗ್ ಅಳವಡಿಸುವಂತಹ ಸುರಂಗ ಕೊರೆಯಲಾಗಿದೆ. ಆ ಮಾರ್ಗದಲ್ಲಿ ಇನ್ನೊಂದು ಸುರಂಗ ಕೊರೆಯಬೇಕಿರುವ ಕೆಲಸ ಮಾಡಬೇಕಿರುವ ಲವಿ ಯಂತ್ರ ಶ್ರೀದಲ್ಲಿ ಕೆಲಸ ಆರಂಭಿಸಲಿದೆ.