ವಿವೇಕಾನಂದರ ಭಾಷಣ ಸ್ಮರಣೆ

Speech memory of Vivekananda
ಇಂಡಿ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಯುವ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಹೂಮಾಲೆ ಅರ್ಪಿಸಲಾಯಿತು. ರಾಮಸಿಂಗ್ ಕನ್ನೊಳ್ಳಿ, ಶರಣಬಸು ಲಬ್ಬಾ, ಪ್ರಭು ಕಪ್ಪಾ, ದಾನಪ್ಪ ಹತ್ತಿ ಇದ್ದರು.
Published on

ಇಂಡಿ: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣವನ್ನು ಸ್ಮರಿಸುವ ದಿನದ ಅಂಗವಾಗಿ ಪಟ್ಟಣದ ಯುವಕರು ವಿವೇಕಾನಂದರ ಪ್ರತಿಮೆಗೆ ಸೋಮವಾರ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು.

ಸ್ವಾಮಿ ವಿವೇಕಾನಂದ ಯುವ ಸಂಘದ ಅಧ್ಯಕ್ಷ ರಾಮಸಿಂಗ್ ಕನ್ನೊಳ್ಳಿ ಮಾತನಾಡಿ, ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ 130 ವರ್ಷಗಳ ಹಿಂದೆ ಇದೇ ದಿನ ವಿಶ್ವಧರ್ಮ ಸಮ್ಮೇಳನದಲ್ಲಿ ಅದ್ಭುತ ಭಾಷಣದ ಮೂಲಕ ವಿಶ್ವವನ್ನು ಗೆದ್ದು, ಭಾರತ ಮತ್ತು ಭಾರತದ ಚಿಂತನೆಯೇ ಶ್ರೇಷ್ಠ ಎಂದು ವಿಶ್ವಕ್ಕೆ ಸಾರಿದ್ದರು ಎಂದರು.

ಶರಣಬಸು ಲಬ್ಬಾ, ಪ್ರಭು ಕಪ್ಪಾ, ದಾನಪ್ಪ ಹತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net