

ಮಂಡ್ಯ: ಅಗತ್ಯಯುಳ್ಳವರಿಗೆ ಉಚಿತವಾಗಿ ವಾಕ್ ಮತ್ತು ಶ್ರವಣದೋಷ ತಪಾಸಣೆ ಮಾಡಿ ಸಲಕರಣೆ ನೀಡಲಾಗುತ್ತಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿದರು.
ನಗರದ ಮಾಂಡವ್ಯ ಪ್ರೌಢಶಾಲೆಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ, ಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಾಕ್ ಹಾಗೂ ಶ್ರವಣದೋಷ ತಪಾಸಣೆ, ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಯನ್ಸ್ ಸಂಸ್ಥೆ ಹಾಗೂ ಡಾ.ಎಸ್.ಆರ್.ಚಂದ್ರಶೇಖರ್ ವಾಕ್, ಶ್ರವಣ ಸಂಸ್ಥೆಯು ವಿವಿಧ ಸೇವಾ ಕಾರ್ಯಗಳನ್ನು ಮಾಡಿಕೊಂಡು ಸಮಾಜಮುಖಿಯಾಗಿದೆ. ಇಂತಹ ಸಂಸ್ಥೆಯು ಮಂಡ್ಯ ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸಂಚರಿಸಿ ಸೇವಾ ಕಾರ್ಯ ಸಲ್ಲಿಸುತ್ತಿದೆ. ಯಾರಿಗೆ ವಾಕ್ ಮತ್ತು ಶ್ರವಣದೋಷವಿದೆಯೋ ಅಂತವರು ಮೊಬೈಲ್ ಸಂಚಾರ ವಾಹನದಲ್ಲಿಯೇ ತಪಾಸಣೆ ನಡೆಸಿ ಕಿವಿ ಮತ್ತು ಧ್ವನಿಯನ್ನು ಪರೀಕ್ಷಿಸಲಾಗುತ್ತದೆ. ಬಿಪಿಎಲ್ ಕಾರ್ಡ್‌ದಾರರು ಉಚಿತವಾಗಿ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.
ಬಳಿಕ ಮಾತನಾಡಿದ ವಾಕ್ ಮತ್ತು ಶ್ರವಣ ತಜ್ಞ ಡಾ.ಅನಿಲ್, ಮಾಂಡವ್ಯ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಹದೇವಯ್ಯ, ಪ್ರಾಂಶುಪಾಲ ಚಂದ್ರಶೇಖರ್ ಇತರರಿದ್ದರು. ಇದೇ ವೇಳೆ ಮಾಂಡವ್ಯ ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ವಾಕ್ ಮತ್ತು ಶ್ರವಣ ಪರೀಕ್ಷೆ ನಡೆಸಲಾಯಿತು.