

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಪರಿಸರ ದಿನ ನಿಮಿತ್ತ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಹು&ಧಾ ನಾಗರಿಕ ಪರಿಸರ ಸಮಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ವಿದ್ಯಾಥಿರ್ಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
5 ರಿಂದ 7ನೇ ವರ್ಗದ ವಿದ್ಯಾಥಿರ್ಗಳಿಗೆ ನಿಬಂಧ, ಸ್ಥಳದಲ್ಲೇ ಚಿತ್ರ ಬಿಡುಸುವ ಸ್ಪರ್ಧೆ ಹಾಗೂ 8&10ನೇ ತರಗತಿ ವಿದ್ಯಾಥಿರ್ಗಳಿಗೆ ಭಾಷಣ, ನಿಬಂಧ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಧಾರವಾಡ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಭಾಗವಹಿಸುವ ವಿದ್ಯಾಥಿರ್ಗಳು ಶಾಲೆ ಮುಖ್ಯೋಪಾಧ್ಯಾಯರಿಂದ ಪರವಾನಗಿ ಪತ್ರದೊಂದಿಗೆ ಮೇ 29ರೊಳಗೆ ಹೆಸರು ನೋಂದಾಯಿಬಸೇಕು. ಒಂದು ಶಾಲೆಯಿಂದ 5 ವಿದ್ಯಾಥಿರ್ಗಳು ಮಾತ್ರ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ ಹು&ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಅವರನ್ನು ಸಂಪಕಿರ್ಸಬಹುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ ಐ.ಎಚ್. ಜಗದೀಶ ತಿಳಿಸಿದ್ದಾರೆ.