ಆಕರ್ಷಕ ಸಿಡಿಮದ್ದಿನ ಕಾರ್ಯಕ್ರಮ 12ರಂದು

9 dnd 2
Published on

ದಾಂಡೇಲಿ: ನಗರದ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆ ವತಿಯಿಂದ ದಸರಾ ನಿಮಿತ್ತ ಅ.12 ರಂದು ಸಂಜೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಖಾನೆಯ ಡೀಲಕ್ಸ್ ಮೈದಾನದಲ್ಲಿ ಪ್ರತಿವರ್ಷದಂತೆ ಈ ಬಾರಿಯು ಆಕರ್ಷಕ ಸಿಡಿ ಮದ್ದಿನ ಮತ್ತು ರಾಮಲೀಲಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಖಾನೆಯ ಸಂಪರ್ಕ ಅಧಿಕಾರಿ ರಾಜೇಶ ತಿವಾರಿ ತಿಳಿಸಿದರು.

ಮಂಗಳವಾರ ಕರೆದ ಸಭೆಯಲ್ಲಿ ಮಾತನಾಡಿದ ಅವರು, ಅಂದಾಜು 3.50 ಲಕ್ಷ ರೂ. ಬೆಲೆಯ ಸಿಡಿಮದ್ದುಗಳನ್ನು ಹಾರಿಸಲಾಗುವುದು. ರಾವಣ (50 ಅಡಿ), ಕುಂಭಕರ್ಣ (46ಅಡಿ), ಮೇಘನಾಥನ (46 ಅಡಿ) ಪುತ್ಥ್ಥಳಿಗಳನ್ನು ದಹಿಸಲಾಗುವುದು. ಕಾರ್ಯಕ್ರಮಕ್ಕೆ ಅಂದಾಜು 50 ಸಾವಿರ ಜನ ಸೇರುವ ಸಾಧ್ಯತೆ ಇದೆ ಎಂದರು.

ಸಿಪಿಐ ಭಿಮಣ್ಣ ಸೂರಿ ಮಾತನಾಡಿ, ಪೊಲೀಸ್ ಇಲಾಖೆಯಿಂದ ದಾಂಡೇಲಪ್ಪ ಜಾತ್ರೆ ಹಾಗೂ ಸಿಡಿ ಮದ್ದಿನ ಕಾರ್ಯಕ್ರಮಕ್ಕಾಗಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ವೇದಿಕೆಯಲ್ಲಿ ಸಂಪರ್ಕ ಅಧಿಕಾರಿ ರಾಘವೇಂದ್ರ ಜಿ.ಆರ್., ಪಿಎಸ್‌ಐ ಐ.ಆರ್. ಗಡ್ಡೆಕರ, ಕೃಷ್ಣಗೌಡ ಅರಕೇರಿ, ಕಾರ್ಖಾನೆಯ ಸೆಕ್ಯೂರಿಟಿ ಅಧಿಕಾರಿ ಕುಶಾಲಪ್ಪ, ಸಹಾಯಕ ಅಧಿಕಾರಿ ಎಸ್.ಜಿ. ಪಾಟೀಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net