ದಾಂಡೇಲಿಯಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನ

DND SUDUMADDU
Published on

ದಾಂಡೇಲಿ: ವಿಜಯದಶಮಿಯಂದು ದುಷ್ಟಶಕ್ತಿಯ ನಿಗ್ರಹದ ಸಂಕೇತವಾಗಿ ಶನಿವಾರ ರಾತ್ರಿ ವೆಸ್ಟ್​ಕೋಸ್ಟ್ ಪೇಪರ್ ಮಿಲ್ ವತಿಯಿಂದ ಅದ್ದೂರಿಯಾಗಿ ಡಿಲಕ್ಸ್ ಮೈದಾನದಲ್ಲಿ ರಾಮಲೀಲಾ ಕಾರ್ಯಕ್ರಮದಲ್ಲಿ ರಾವಣನ ದಹನ ಮಾಡಲಾಯಿತು.

ತೇರಗಾಂವದ ಕಲಾವಿದ ಉಮೇಶ ರಾಹುತ್ ಮೂರ್ತಿ ತಯಾರಿಸಿದ್ದು ರಾವಣ ಎತ್ತರ 50 ಅಡಿ, ಕುಂಭಕರ್ಣ 45 ಅಡಿ ಹಾಗೂ ಮೇಘನಾಥ 45 ಎತ್ತರ ನಿರ್ವಿುಸಲಾಗಿದೆ. ಅಂಕೋಲಾದವರು ನಡೆಸಿಕೊಟ್ಟ ಆಕರ್ಷಕ ಸಿಡಿ ಮದ್ದಿನ ಕಾರ್ಯಕ್ರಮ ಜನಮನ ಸೆಳೆದವು. ಆಕಾಶದಲ್ಲಿ ರಂಗು ರಂಗಿನ ಬಿರಿಸು ಬಾಣಗಳ ಚಿತ್ರ ಹಾಗೂ ರಂಗು ರಂಗಿನ ನಕ್ಷತ್ರಗಳೆ ಧರೆಗಿಳಿದು ಬಂದಂತೆ ಸುಂದರ ದೃಶ್ಯ ನೋಡಲು ಎರಡು ಕಣ್ಣು ಸಾಲದೆಂಬ ಭಾವನೆ ಉಂಟಾಯಿತು. ಸರಿಸುಮಾರು ಒಂದು ತಾಸು ಕಾಲ ನಡೆದ ಈ ಪ್ರದರ್ಶನದಲ್ಲಿ ನೂರಾರು ಸಿಡಿಮದ್ದನ್ನು ಸಿಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net