

ಬೆಂಗಳೂರು: ಕೇಂದ್ರ ಸರ್ಕಾರವು ಶನಿವಾರ ಮಂಡಿಸುತ್ತಿರುವ 2025-26ನೇ ಸಾಲಿನ ಆಯವ್ಯಯದಲ್ಲಿ ಕರ್ನಾಟಕವು ವಿವಿಧ ಕ್ಷೇತ್ರದಲ್ಲಿ ಅನುಕೂಲಕರ ಘೋಷಣೆ ಹೊರಬೀಳಬಹುದೆಂದು ನಿರೀಕ್ಷೆ ಇಟ್ಟುಕೊಂಡಿದೆ. ಕಾಂಗ್ರೆಸೇತರ ಸರ್ಕಾರ ಇರುವ, ಎನ್ಡಿಎ ಮೈತ್ರಿ ಸರ್ಕಾರ ಇಡುವ ಕಡೆಗಳಲ್ಲಿ ರಸ್ತೆ ಸೇರಿದಂತೆ ಮೂಲಸೌಕರ್ಯ, ಕೈಗಾರಿಕೆ ಉತ್ತೇಜನಕ್ಕೆ ವಿಶೇಷ ಅನುದಾನಗಳು, ಪ್ಯಾಕೇಜ್ಗಳನ್ನು ಕೇಂದ್ರ ಸರ್ಕಾರ ನೀಡಿದೆ. ಅದೇ ರೀತಿ ಕರ್ನಾಟಕವೂ ಸಹ ಅಪೇಕ್ಷೆ ಇಟ್ಟುಕೊಂಡಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ಕೇಂದ್ರದ ಮುಂದೆ ಬೇಡಿಕೆ ಸಲ್ಲಿಸಿದ್ದು, ಬಜೆಟ್ನಲ್ಲಿ ಪರಿಗಣಿಸುವಂತೆ ಕೋರಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯಗಳಿಗೆ ಕೇಂದ್ರ ಸರ್ಕಾರ ಐದು ಸಾವಿರ ಕೋಟಿ ರೂ. ಕೊಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹಣಕಾಸು ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಜತೆಗೆ ಸಿಎಂ ಕೂಡ ಅದೇ ಭಾವನೆ ವ್ಯಕ್ತಪಡಿಸಿದ್ದಾರೆ. ಭೌಗೋಳಿಕ ವೈಶಿಷ್ಟ್ಯ ಮತ್ತು ಪರಿಸರ ಸಂಬಂಧಿ ಗುಣಲಕ್ಷಣಗಳಿಂದಾಗಿ ರಾಜ್ಯದ ಪಶ್ಚಿಮಘಟ್ಟ ಪ್ರದೇಶ ಹಲವಾರು ಬಗೆಯ ಸವಾಲುಗಳನ್ನು ಎದುರಿಸುತ್ತಿದ್ದು, ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಪಶ್ಚಿಮಘಟ್ಟದ ಸಂರಕ್ಷಣೆಗಾಗಿ ಮಲೆನಾಡು ಪ್ರದೇಶದ ಸಮಗ್ರ ಅಭಿವೃದ್ದಿಗಾಗಿ ಐದು ವರ್ಷಗಳ ಅವಧಿಗೆ 10,000 ರೂಪಾಯಿಗಳ ವಿಶೇಷ ಅನುದಾನವನ್ನು ಘೋಷಿಸಬೇಕು ಎಂಬುದು ರಾಜ್ಯದ ಪ್ರಧಾನ ಬೇಡಿಕೆಯಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ನೆರವು ಪ್ರಕಟಿಸಬೇಕು, ಭದ್ರಾ ಮೇಲ್ದಂಡೆ ಯೋಜನೆಗೆ ೋಷಣೆ ಮಾಡಿದ ಹಣವನ್ನು ಬಿಡುಗಡೆ ಮಾಡಬೇಕೆಂಬುದು ಕೋರಿಕೆಯಾಗಿದೆ. ಅದೇ ರೀತಿ ಬೆಂಗಳೂರು ನಗರಕ್ಕೆ ವಿಶೇಷ ಅನುದಾನ, ಬೆಳೆಯುತ್ತಿರುವ ರಾಜ್ಯದ ಪ್ರಮುಖ ನಗರಗಳಿಗೆ ಅನುದಾನ ಕೊಡಬೇಕೆಂಬ ಅಪೇಕ್ಷೆ ಇದೆ.
ಕೇಂದ್ರ ಸರ್ಕಾರ ಕಿವುಡಾಗಿದೆ. ಕೇಂದ್ರ ಸರ್ಕಾರದಿಂದ ನಿರೀಕ್ಷೆ ಮಾಡುವುದೇ ಇಲ್ಲ ಎಂದೇನಿಲ್ಲ. ನಿರೀಕ್ಷೆ ಮಾಡಿದರೂ ಅವು ಹುಸಿಯಾಗುತ್ತಿವೆ. - ಸಿದ್ದರಾಮಯ್ಯ ಮುಖ್ಯಮಂತ್ರಿ
1. ಕಳೆದ ಬಾರಿ ದೇಶದಲ್ಲಿ 12 ಕೈಗಾರಿಕಾ ಸ್ಮಾರ್ಟ್ಸಿಟಿ ೋಷಿಸಿದ್ದು, ಈ ಬಾರಿ ಕರ್ನಾಟಕಕ್ಕೆ ಒಂದಾದರೂ ಕೈಗಾರಿಕಾ ಸ್ಮಾರ್ಟ್ ಸಿಟಿ ಮತ್ತು ಏಮ್ಸ್ ಘೋಷಣೆ ನಿರೀಕ್ಷೆ 2. ಬಹು ನಿರೀಕ್ಷಿತ ಹೊಸ ರೈಲ್ವೆ ಮಾರ್ಗಗಳ ಘೋಷಣೆ, ಕುಂಟುತ್ತಾ ಸಾಗಿರುವ ಹೊಸ ಮಾರ್ಗಗಳಿಗೆ ಹೆಚ್ಚಿನ ಅನುದಾನದ ಬಯಕೆ. ಜತೆಗೆ ಬುಲೆಟ್ ಟ್ರೈನ್ ಯೋಜನೆ ಘೋಷಣೆ. 3. ರಾಜ್ಯದಲ್ಲಿ ಮತ್ತೆ 2-3 ಹೊಸ ರಾಷ್ಟ್ರೀಯ ಹೆದ್ದಾರಿಗಳ ಪ್ರಸ್ತಾವನೆಗಳಿಗೆ ಒಪ್ಪಿಗೆ ಸಿಗಬೇಕೆಂಬ ಬಯಕೆ. 4. ಗುಜರಾತ್ನಲ್ಲಿರುವ ಗಿಫ್ಟ್ ಸಿಟಿಯಂತೆ ಬೆಂಗಳೂರಿನಲ್ಲಿ ಜಾಗತಿಕ ಹಣಕಾಸು ಮತ್ತು ಐಟಿ ಹಬ್ ಸೃಷ್ಟಿಸಲು ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಸ್ಥಾಪನೆ 5. ಬೆಂಗಳೂರು ದಕ್ಷಿಣ, ಪಶ್ಚಿಮ, ಮತ್ತು ಹೊರವಲಯಗಳಲ್ಲಿಯೂ ಮೆಟ್ರೋ ಸಂಪರ್ಕ ವಿಸ್ತರಣೆಗೆಗಾಗಿ ಮೆಟ್ರೋ 4ನೇ ಹಂತಕ್ಕೆ ಹೆಚ್ಚಿನ ಅನುದಾನ.