ವಿಷ ಪರಿಹಾರೇಶ್ವರ ಸನ್ನಿಧಿಗೆ ವಿಶೇಷ ಪೂಜೆ

Special worship to the Lord of vishaparihaareshwara
Published on

ರಟ್ಟಿಹಳ್ಳಿ: ತಾಲೂಕಿನ ಮಕರಿ ಗ್ರಾಮದ ಪ್ರವೇಶ ದ್ವಾರದಲ್ಲಿರುವ ವಿಷ ಪರಿಹಾರೇಶ್ವರ ಕಟ್ಟೆಯ ನಾಗರಮೂರ್ತಿಗೆ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ವಿಶೇಷವಾಗಿ ಕ್ಷೀರಾಭಿಷೇಕ, ಹರಳಿನ ಕಲ್ಲುಗಳ ಪೂಜೆ ಸೇರಿದಂತೆ ವಿವಿಧ ಧಾರ್ವಿುಕ ಕಾರ್ಯಕ್ರಮ ಜರುಗಿದವು.

ಗ್ರಾಮದ ಅರ್ಚಕರಾದ ಈರಯ್ಯ ಆರಾಧ್ಯಮಠ ಮತ್ತು ಗಣೇಶ ಅಂಗಡಿ ಪೂಜಾ ಕಾರ್ಯಕ್ರಮ ನೆರವೇರಿಸಿದರು. ನಾಗರ ಮೂರ್ತಿಗೆ 108 ಮಂತ್ರಗಳ ಪಠಣ ಮೂಲಕ ಕ್ಷೀರಾಭಿಷೇಕ ಮಾಡಲಾಯಿತು. ಹರಳಿನ ಕಲ್ಲುಗಳನ್ನು ನಾಗರ ಮೂರ್ತಿಯ ಸನ್ನಿಧಿಯಲ್ಲಿ ಇಟ್ಟು 108 ಮಂತ್ರಗಳನ್ನು ಪಠಣ ಮಾಡಿ, ಭಕ್ತರಿಗೆ ವಿತರಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ಜನರು, ಪೂಜೆ ಮಾಡದ ಕಲ್ಲುಗಳನ್ನು ಕೊಂಡೊಯ್ದರು. ಈ ಕಲ್ಲುಗಳನ್ನು ಮನೆ, ಜಮೀನಿನಲ್ಲಿ ಕಟ್ಟುವುದರಿಂದ ವಿಷಜಂತುಗಳ ಬಾಧೆ ಇರುವುದಿಲ್ಲ ಎಂಬುದು ಜನರ ನಂಬಿಕೆಯಾಗಿದೆ.

ಕಮಿಟಿ ಅಧ್ಯಕ್ಷ ಬಾಣಪ್ಪ ಸಿದ್ದಗೇರಿ, ಗಣೇಶ ಬಣಕಾರ, ಪರಮೇಶ ಹುಲ್ಮನಿ, ದೊಡ್ಡವೀರಪ್ಪ ಹುಲ್ಮನಿ, ಡಿ.ಬಿ. ಪಾಟೀಲ, ಆರ್.ಎನ್. ಗಂಗೋಳ, ಮಾಲತೇಶ ಗಂಗೋಳ, ಹನುಮಂತಗೌಡ ಭರಮಣ್ಣನವರ, ಶಿವಪ್ಪ ಬಸನಾಳ, ಚಮನಸಾಬ್ ದೊಡ್ಡಮನಿ, ತಿಪ್ಪೇಸ್ವಾಮಿ, ಮಕರಿ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net