ವೀರಾಂಜನೆಯ ಸ್ವಾಮಿಗೆ ವಿಶೇಷ ಪೂಜೆ

Gorebal 1
ಗೊರೇಬಾಳ ಕ್ಯಾಂಪ್‌ನ ವೀರಾಂಜನೇಯ ದೇವಸ್ಥಾನಕ್ಕೆ ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಮುಖರಾದ ಗಿರೀಶ್ ಶೆಟ್ಟಿ, ರಾಜರಾವ್, ಎನ್.ವೆಂಕಣ್ಣ, ಮಂಜುನಾಥ್ ಶೆಟ್ಟಿ ಇತರರಿದ್ದರು.
Published on

ಗೊರೇಬಾಳ: ಶ್ರಾವಣ ಮಾಸ ನಿಮಿತ್ತ ಇಲ್ಲಿನ ಗೊರೇಬಾಳ ಕ್ಯಾಂಪ್‌ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಪೂಜಾ ಮಹೋತ್ಸವ ಹಾಗೂ ಮಹಿಳೆಯರಿಂದ ಕುಂಭೋತ್ಸವ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ ವೀರಾಂಜನೇಯ ಸ್ವಾಮಿಗೆ ಅರ್ಚಕ ಮಲ್ಲಯ್ಯ ಸ್ವಾಮಿ ಅವರು ರುದ್ರಾಭಿಷೇಕ, ಕುಂಕುಮಾರ್ಚನೆ, ಸಹಸ್ರ ಬಿಲ್ವರ್ಚನೆ ಮತ್ತು ಎಲೆ ಚಟ್ಟು ಪೂಜೆ ನೆರವೇರಿಸಿದರು. ಗಂಗಾ ಪೂಜೆ ನಂತರ ಕುಂಭೋತ್ಸವದಲ್ಲಿ ಮಹಿಳೆಯರು ಕಳಸಗಳೊಂದಿಗೆ ದೇವಾಲಯದವರೆಗೆ ಮೆರವಣಿಗೆಯಲ್ಲಿ ಸಾಗಿದರು.

ಒಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಬಸವಲಿಂಗ ಶಿವಾಚಾರ್ಯರು ಭಕ್ತರಿಗೆ ಆಶೀರ್ವಚನ ನೀಡಿದರು. ಸಂಜೆ ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಗಿರೀಶ್ ಶೆಟ್ಟಿ, ರಾಜರಾವ್, ಎನ್.ವೆಂಕಣ್ಣ, ಮಂಜುನಾಥ್ ಶೆಟ್ಟಿ, ಅಮರೇಶ ವೀರಾಪುರ, ನಿವೃತ್ತ ಅರಣ್ಯ ಅಧಿಕಾರಿ ಬಾಲಯ್ಯಸಿಂಗ್ರಿ, ಗುಂಡಪ್ಪ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net