ಎಲ್ಲೆಡೆ ಶ್ರಾವಣ ಮಾಸದ ಸಂಭ್ರಮ

mkg
Published on

ಹೊನ್ನಾಳಿ: ಶ್ರಾವಣ ಮಾಸದ ಕೊನೆಯ ಶನಿವಾರದ ನಿಮಿತ್ತ ತಾಲೂಕಿನಾದ್ಯಂತ ತಿರುಪತಿ ತಿರುಮಲ, ಆಂಜನೇಯ ಹಾಗೂ ವಿವಿಧ ದೇವರುಗಳಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು.

ಭಕ್ತಾಧಿಗಳು ಮುಂಜಾನೆಯಿಂದಲೇ ಪಟ್ಟಣದ ದಿಡ್ಡಿ ಆಂಜನೇಯ, ಕುಂದೂರು, ಕುಂಬಳೂರು, ಬೇಲಿಮಲ್ಲೂರು, ದಿಡಗೂರು ಮತ್ತಿತರ ಗ್ರಾಮಗಳ ಆಂಜನೇಯಸ್ವಾಮಿ ದರ್ಶನ ಪಡೆದರು.
ತಿರುಮಲ ವೆಂಕಟೇಶ, ಮಾದೇನಹಳ್ಳಿ ಗ್ರಾಮದ ವೆಂಕಟೇಶ್ವರ ದೇವಸ್ಥಾನದಲ್ಲೂ ಸ್ವಾಮಿಗೆ ವಿಶೇಷ ಪೂಜೆ ನಡೆದವು.

ಕುಂದೂರು ಗ್ರಾಮದ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ಕೆಲ ಭಕ್ತರು ಮುದ್ರೆಯನ್ನು ಹಾಕಿಸಿಕೊಂಡರು. ಹಲವೆಡೆ ದೇವಸ್ಥಾನಗಳಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಕೊನೆ ಶ್ರಾವಣ ಶನಿವಾರದ ಪ್ರಯುಕ್ತ ದೇವರ ಪೂಜೆಗೆ ಬೇಕಾದ ಹಣ್ಣು, ಕಾಯಿ ಹಾಗೂ ಹೂವಿನ ದರ ಹೆಚ್ಚಾಗಿದ್ದವು. ಒಂದು ಕೆಜಿ ಸೇವಂತಿಗೆ 175 ರೂ., ಒಂದು ಹಾರ 150 ರೂ., ತೆಂಗಿನಕಾಯಿ 30 ರೂ. ದರ ನಿಗದಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net