ಶುದ್ಧಏಕಾದಶಿಯಂದು ವಿಠ್ಠಲನಿಗೆ ವಿಶೇಷ ಪೂಜೆ

Untitled-1
Published on

ನೆಲಮಂಗಲ: ನಗರದ ಅರಿಶಿಣಕುಂಟೆ ಬಳಿಯ ವಿಶ್ವಶಾಂತಿ ಆಶ್ರಮದಲ್ಲಿ ಜು.6ರಂದು ಬೆಳಗ್ಗೆ 10.30ಕ್ಕೆ ಆಷಾಢ ಶುದ್ಧಏಕಾದಶಿ ಪ್ರಯುಕ್ತ ಶ್ರೀವಿಶ್ವರೂಪ ವಿಜಯ ವಿಠ್ಠಲ ದೇವರಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಜು.5, 6ರಂದು ಬೆಳಗ್ಗೆಯಿಂದಲೇ ವಿಜಯವಿಠ್ಠಲ ದೇವರಿಗೆ ಜ್ಯೋತಿ ಅಂಕುರಾರ್ಪಣೆ, ಪಂಚಾಮೃತ ಅಭಿಷೇಕ, ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ಇರಲಿದೆ. ಆಶ್ರಮದ ಪ್ರವೇಶ ದ್ವಾರದಲ್ಲಿರುವ ಆಂಜನೇಯ, ಮಾರ್ಕೆಂಡೇಯ ದೇವರು ಸೇರಿ ದೇವಾಲಯದ ಎತ್ತರದ ವಿಠ್ಠಲ ವಿಗ್ರಹದ ಸುತ್ತಲೂ ಇರುವ ಅಷ್ಟಲ್ಮ ದೇವತೆಗಳಿಗೆ ವಿಶೇಷ ಧಾರ್ಮಿಕ ಕಾರ್ಯಗಳು ನೇರವೇರಲಿವೆ. ವಿಶ್ವಶಾಂತಿ ಆಶ್ರಮ ಟ್ರಸ್ಟ್​ ಅಧ್ಯೆ ರಮಾಕೇಶವ ದಾಸ ಹಾಗೂ ಧರ್ಮದರ್ಶಿ ಮುರುಳೀಧರ್​ ಪೈ, ಶ್ರೀರಾದೇಶ್ಯಾಂಪೈ ಭಾಗವಹಿಸಲಿದ್ದಾರೆ ಎಂದು ಆಶ್ರಮ ವ್ಯವಸ್ಥಾಪಕ ನಾಗರಾಜು ತಿಳಿಸಿದ್ದಾರೆ. 20ಕ್ಕೂ ವಿವಿಧ ತಂಡದಿಂದ ಭಜನೆ, ಕೀರ್ತನೆಗಳು ಹಾಗೂ ಗೀತಗಾಯನ ಜತೆಗೆ ಭರತನಾಟ್ಯ ಹಾಗೂ ಕೋಲಾಟ ಕಾರ್ಯಕ್ರಮ ನಡೆಸಲಾಗುತ್ತಿದೆ.

ಸ್ಥಳದ ವಿಶೇಷತೆ: ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ರಾ.ಹೆದ್ದಾರಿ 48ರಲ್ಲಿ 24 ಕಿ.ಮೀ. ದೂರ ಕ್ರಮಿಸಿದರೆ ವಿಶ್ವಶಾಂತಿ ಆಶ್ರಮ ಸಿಗಲಿದೆ. ಮಹಾದ್ವಾರ ಪ್ರವೇಶಿಸುತ್ತಿದ್ದಂತೆಯೇ ಎಡಭಾಗದಲ್ಲಿ ಎತ್ತರದ ಪ್ರಸನ್ನಾಂಜನೇಯ, ಮಾರ್ಕಂಡೇಯ, ದತ್ತಾತ್ರೇಯ, ಸತ್ಯನಾರಾಯಣಸ್ವಾಮಿ, ಲ್ಮ ಸಮೇತ ಭೂವರಾಹಸ್ವಾಮಿ ಮತ್ತು ಸೀತಾರಾಮಲಕ್ಷಣ ದೇವರ ಮಂದಿರಗಳಿವೆ. 36 ಅಡಿ ಎತ್ತರದ ಶ್ರೀವಿಶ್ವರೂಪ ವಿಜಯ ವಿಠ್ಠಲ ದೇವರ ಬೃಹತ್​ ಪ್ರತಿಮೆ ಆಕರ್ಷಣೆಯವಾಗಿದೆ. ಭೇದ ಭಾವವಿಲ್ಲದೆ ಪ್ರತಿಯೊಬ್ಬರೂ ವಿಗ್ರಹ ಸ್ಪರ್ಶಿಸಿ ಪೂಜಿಸುವ ಅವಕಾಶ ಕಲ್ಪಿಸಲಾಗಿದೆ. ವಿಠಲನ ವಿಗ್ರಹದ ಇಕ್ಕೆಲಗಳಲ್ಲಿ 13 ಕೋಟಿ ರಾಮನಾಮ ಜಪದ ಸ್ತಂಭ, ಅಷ್ಟಲಕ್ಷಿ$್ಮಯರ ವಿಗ್ರಹ, ಪಕ್ಕದಲ್ಲಿ ಅಮೃತ ಶಿಲೆಯ ದುರ್ಗಾಮಂದಿರ, ಪ್ರವೇಶ ದ್ವಾರದಿಂದ ಸ್ವಲ್ಪ ದೂರದಲ್ಲೇ ಭಗವದ್ಗೀತಾ ಮಂದಿರದಲ್ಲಿರುವ ಹರಿ ಅವತಾರಗಳ ಬೃಹತ್​ ಮೂರ್ತಿ, ಶ್ವೇತವರ್ಣದ ಗಾಯತ್ರಿ ದೇವಿಯ ಮೂರ್ತಿ, ಸಪ್ತ ಋಷಿಗಳ ವಿಗ್ರಹ, ಶ್ವೇತಾಶ್ವಗಳ ರಥ, ಗೀತಾಬೋಧನೆಯ ದೃಶ್ಯ, ಗೀತಾ ಮಂದಿರ ವಿಶೇಷತೆಯಿಂದ ಕೂಡಿದ್ದು, ಪವಿತ್ರ ಧಾರ್ಮಿಕ ಕೇಂದ್ರ ಹಾಗೂ ಪ್ರವಾಸಿಗರ ತಾಣವಾಗಿ ಜನಪ್ರಿಯತೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net