

ಪರಶುರಾಮಪುರ: ನಾಗಗೊಂಡನಹಳ್ಳಿಯ ಚಿಲುಮೇರುದ್ರಸ್ವಾಮಿ ಮಠದ ಆವರಣದಲ್ಲಿನ ಈಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಸುತ್ತಮುತ್ತಲ ಗ್ರಾಮಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಸ್ಥಾನ ಸಮಿತಿಯ ಎಚ್.ಓಬಳಪ್ಪ, ಜೆ.ಎಚ್.ಬೊಮ್ಮಯ್ಯ, ಗ್ರಾಪಂ ಸದಸ್ಯರಾದ ಸಿದ್ದೇಶ, ಹಂಪಣ್ಣ, ಚಲುಮಕ್ಕ ಹನುಮಂತರಾಯ, ವರಲಕ್ಷ್ಮೀ ಚಲ್ಮೇಶ, ನರಸಿಂಹಪ್ಪ, ರವಿಚಂದ್ರ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನಸ್ವಾಮಿ, ಮುಖಂಡರಾದ ಜೆ.ಎಲ್.ಶ್ರೀನಿವಾಸ್, ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಉಮಾ ಮಹೇಶ್ವರಪ್ಪ, ರಾಮಾಂಜಿನೇಯ, ದೇವರಾಜು, ತಿಪ್ಪೇಸ್ವಾಮಿ, ಕೆಂಜಡಿಯಪ್ಪ, ಸುರೇಶ ಇದ್ದರು.