

ಗೋಕರ್ಣ: ಪುರಾಣ ಪ್ರಸಿದ್ಧ ಶ್ರೀಮಹಾಬಲೇಶ್ವರ ಆತ್ಮಲಿಂಗಕ್ಕೆ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಮಂಗಳವಾರ ಪ್ರದೋಷ ಪರ್ವ ಕಾಲದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು.
ಪ್ರಧಾನ ಅರ್ಚಕ ವೇ.ಅಮೃತೇಶ ಹಿರೇ ನೇತೃತ್ವದಲ್ಲಿ ನಡೆದ ಪೂಜಾಭಿಷೇಕದಲ್ಲಿ ಕ್ಷೇತ್ರದ ಉಪಾಧಿವಂತ ವೈದಿಕರಾದ ವೇ. ಮಹಾಬಲ ಉಪಾಧ್ಯ, ವೇ.ಪರಮೇಶ್ವರ ಮಾರ್ಕಾಂಡೆ, ರಮೇಶ ಪ್ರಸಾದ, ಪ್ರಶಾಂತ ಹಿರೇಗಂಗೆ, ಗಣೇಶ ಜಂಭೆ ಮುಂತಾದವರು ನಿರ್ವಹಿಸಿದರು.
ಇದಕ್ಕೂ ಮೊದಲು ಶ್ರೀಗಳು ಪುರಾಣ ಖ್ಯಾತ ಶ್ರೀಮಹಾಗಣಪತಿಗೆ ಅರ್ಚಕ ವೇ. ಶ್ರೀರಾಮ ಶಂಕರಲಿಂಗ ನೇತೃತ್ವದಲ್ಲಿ ಪೂಜಾರ್ಚನೆ ನೆರವೇರಿಸಿದರು.