ಗ್ರಾಮದೇವತೆ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ

02-kkr-2(8-24
ಕಿಕ್ಕೇರಿಯ ಗ್ರಾಮದೇವತೆ ಮಹಾಲಕ್ಷ್ಮೀ(ಕಿಕ್ಕೇರಮ್ಮ) ದೇವಿಗೆ ಆಷಾಢ ಮಾಸದ ಕೊನೆ ಶುಕ್ರವಾರ ಸಂಜೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಕಿಕ್ಕೇರಿ : ಆಷಾಢ ಮಾಸದ ಕೊನೇ ಶುಕ್ರವಾರದ ಹಿನ್ನೆಲೆಯಲ್ಲಿ ಗ್ರಾಮದೇವತೆ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಂಜೆ ನಡೆದ ವಿಶೇಷ ಪೂಜೆಯಲ್ಲಿ ಮಹಿಳೆಯರು, ಯುವತಿಯರು ಸರತಿಯಲ್ಲಿ ನಿಂತು, ಗುಡಿಯ ಸುತ್ತ ಪ್ರದಕ್ಷಿಣೆ ಹಾಕಿ ದೇವಿಯ ದರ್ಶನ ಪಡೆದರು. ನಿಂಬೆಹಣ್ಣಿನ ಆರತಿ, ಹೆಜ್ಜೆಗೊಂದು ನಮಸ್ಕಾರ ಸೇವೆಗಳು ನಡೆದವು. ದೇವಿಗೆ ಪರಿಮಳ ಪುಷ್ಪ, ವಸ್ತ್ರಾಭರಣಗಳೊಂದಿಗೆ ಸರ್ವಾಲಂಕಾರ ಮಾಡಲಾಗಿತ್ತು. ಅಮ್ಮನವರಿಗೆ ವಿಶೇಷವಾಗಿ ವಿಳ್ಯದೆಲೆ, ನಿಂಬೆಹಣ್ಣು ಅಲಂಕಾರ ಮಾಡಲಾಗಿತ್ತು. ಹಲವರು ಮನೆಯಲ್ಲಿ ಪಾರ್ವತಿ ದೇವಿಯ ಕಲಸವನ್ನು ಇಟ್ಟು ಪೂಜಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಬ್ರಹ್ಮೇಶ್ವರ ದೇಗುಲದ ಪಾರ್ವತಿದೇವಿ, ಕೋಟೆ ಮಾರಮ್ಮದೇವಿ, ಬೇವಿನಹಳ್ಳಿ ಚಾಮುಂಡೇಶ್ವರಿ ದೇಗುಲ, ವಡಕಹಳ್ಳಿ ವಡಕಳಮ್ಮ ದೇವಿ, ಐಕನಹಳ್ಳಿಯ ಲಕ್ಷ್ಮೀದೇವಿ, ಚಿಕ್ಕತರಹಳ್ಳಿ ಕೋಡಿಮಾರಮ್ಮ, ಸಾಸಲು ಕುದುರೆಮಂಡಮ್ಮ, ಆನೆಗೊಳ, ಬೋಳಮಾರನಹಳ್ಳಿಯ ಲಕ್ಷ್ಮೀದೇವಿ ದೇಗುಲಗಳಲ್ಲಿ ದೇವಿಗೆ ವಿಶೇಷ ಅಲಂಕಾರ, ಪೂಜೆಗಳು ಜರುಗಿದವು. ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net