ಚನ್ನಕೇಶವನಿಗೆ ವಿಶೇಷ ಪೂಜೆ

10kkr5(4-25 channakeshava murthy puje
ಕಿಕ್ಕೇರಿ ಸಮೀಪದ ಮಂದಗೆರೆಯ ಚನ್ನಕೇಶವ ಮೂರ್ತಿಗೆ ಗುರುವಾರ ಮಾಡಲಾಗಿದ್ದ ವಿಶೇಷ ಅಲಂಕಾರ.
Published on

ಕಿಕ್ಕೇರಿ: ಸಮೀಪದ ಮಂದಗೆರೆಯ ಚನ್ನಕೇಶವ ದೇಗುಲದಲ್ಲಿ ಚನ್ನಕೇಶವ ಮೂರ್ತಿಗೆ ವಿಶೇಷ ಪೂಜೆಗಳು ನಡೆಯಿತು.

ಬೇಲೂರಿನ ಚನ್ನಕೇಶ್ವರ ರಥೋತ್ಸವ ಅಂಗವಾಗಿ ಗುರುವಾರ ಗ್ರಾಮದಲ್ಲಿ ಬೆಳಗ್ಗೆಯಿಂದ ಇಡೀ ದಿನ ದೇವರಿಗೆ ವಿಶೇಷ ಪೂಜೆ, ಹೋಮ-ಹವನಾದಿಗಳು ಸಾಂಗವಾಗಿ ನೆರವೇರಿತು. ಸುಂದರವಾದ ಚನ್ನಕೇಶವ ಮೂರ್ತಿಗೆ ಗಂಗಾಜಲಾಭಿಷೇಕ, ಪಂಚಾಮೃತ ಅಭಿಷೇಕ, ಅಷ್ಟದ್ರವ್ಯ ಅಭಿಷೇಕ, ಹೋಮ-ಹವನಗಳು ಚನ್ನಕೇಶವ ದೇವರ ಒಕ್ಕಲಿನ ಭಕ್ತರಿಂದ ಜರುಗಿತು. ವಿವಿಧ ಶೋಡಷೋಪಚಾರ ಪೂಜಾ ವಿಧಿಗಳು ಜರುಗಿತು.

ದೇವರಿಗೆ ವಿವಿಧ ಪರಿಮಳ ಪುಷ್ಪ, ವಸ್ತ್ರ, ಆಭರಣ ಅಲಂಕಾರ ಮಾಡಿ ಅಷ್ಟೋತ್ತರ ಪಠಣೆ, ಅರ್ಚನೆ ನೆರವೇರಿತು. ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ಹಿರಿಯ ಅರ್ಚಕ ಶಿವಪ್ರಸಾದ್ ಅನ್ನಪೂರ್ಣ ದಂಪತಿಗಳಿಗೆ ಸನ್ಮಾನಿಸಲಾಯಿತು.

ಭಾಸ್ಕರಸ್ವಾಮಿ, ಕೊಪ್ಪಲು ನಾಗೇಂದ್ರ, ಕೆ.ಎಸ್.ಚಂದ್ರಶೇಖರ್, ಸಿ.ದೀಪಕ್, ರಂಗರಾಮಯ್ಯ, ವೆಂಕಟೇಶ್, ಕೆ.ಎಸ್.ಪರಮೇಶ್ವರಯ್ಯ, ಸುಬ್ಬುಕೃಷ್ಣ, ಸೋಮಶೇಖರ್, ಅರ್ಚಕ ಶಿವಪ್ರಸಾದ್, ಕೆ.ಸುಮಾ, ಕುಸುಮಾ, ಅನುಷಾ, ಭಾಗ್ಯಾ, ಸ್ವರ್ಣ, ಲಕ್ಷ್ಮೀ, ಅನ್ನಪೂರ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net