ಮಹಿಳೆಯರಿಂದ ನಾಗದೇವತೆಗೆ ವಿಶೇಷ ಪೂಜೆ

mm 29-7 (1)
Published on

ವಿಜಯಪುರ : ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಭಕ್ತ ಭಾವದಿಂದ ಆಚರಿಸಲಾಯಿತು.

ಹಬ್ಬದ ಅಂಗವಾಗಿ ಮಹಿಳೆಯರು ಹಾಗೂ ಮಕ್ಕಳು ಹೊಸ ಬಟ್ಟೆ ಧರಿಸಿ ನಾಗದೇವತೆಗೆ ಹಾಲು ಎರೆದು ಭಕ್ತಿ ಸಮರ್ಪಿಸಿದರು. ಕುಟುಂಬ ಸದಸ್ಯರ ಹಾಗೂ ಸಹೋದರರ ಆರೋಗ್ಯ ಹಾಗೂ ಯಶಸ್ಸಿಗಾಗಿ ಪ್ರಾರ್ಥಿಸಿದರು. ತಮ್ಮಮ್ಮ ಮನೆ ಸಮೀಪದ ದೇವಸ್ಥಾನ, ಅರಳಿಕಟ್ಟೆ ಕೆಳಗಿರುವ ಕಲ್ಲಿನಿಂದ ಕೆತ್ತಿದ ನಾಗದೇವತೆಗೆ ನೈವೇದ್ಯ ರೂಪದಲ್ಲಿ ಕಡುಬು ಹಾಗೂ ಕೊಬ್ಬರಿಯಲ್ಲಿ ಹಾಲು ಹಾಗೂ ತುಪ್ಪವನ್ನಿಟ್ಟು ನಾಗದೇವತೆಗೆ ಅರ್ಪಿಸಿದರು.

ಪ್ರತಿ ಮನೆಗಳಲ್ಲೂ ಸುತ್ತಮುತ್ತಲಿನ ಕುಟುಂಬ ಸದಸ್ಯರನ್ನು ಕರೆದು ಹಿಟ್ಟಿನಿಂದ ಮಾಡಿದ ನಾಗದೇವತೆಗೆ ಹಾಲೆರೆದು ನಮಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಮಾಡಿದ ವಿವಿಧ ಖಾದ್ಯಗಳನ್ನು ಸುತ್ತ ಮುತ್ತಲಿನ ಕುಟುಂಬದವರಿಗೆ ನೀಡಿದರು. ಮಹಿಳೆಯರು ಜೋಕಾಲಿ ಜೀಕಿ ಸಂಭ್ರಮಿಸಿದರು.

ಇನ್ನು ಹಳ್ಳಿಗಳಲ್ಲಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ಯುವಕರು ಭಾಗವಹಿಸಿ ಮನರಂಜಿಸಿದರು.

ವಿಜಯಪುರದ ಶಹಾಪೇಟಿ ಗಲ್ಲಿಯ ಮಹಾದೇವ ಸ್ಥಾನದ ಬಳಿಯ ನಾಗದೇವತೆಗೆ ಮಹಿಳೆಯರು ಹಾಲೆರೆದು ಭಕ್ತಿ ಸಮರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net