

ಶಿರಸಿ: ನಗರದ ಅಂಬಾಗಿರಿಯ ಶ್ರೀ ರಾಮಕೃಷ್ಣ ಕಾಳಿಕಾಮಠದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ 50ನೇ ವರ್ಧಂತಿ ಪ್ರಯುಕ್ತ ಶ್ರೀ ಕಾಳಿಕಾಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಗೋಪೂಜೆ, ಸಸ್ಯಾರೋಪಣ ಮತ್ತು ಕಲ್ಪವೃಕ್ಷ ಹಾಗೂ ಇತರ ಸಸಿಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.
ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನೆರವೇರಿಸಲಾಯಿತು.
ಶ್ರೀ ರಾಮಕೃಷ್ಣ ಕಾಳಿಕಾಮಠದ ಸಮಿತಿ ಅಧ್ಯಕ್ಷ ವಿ.ಎಂ. ಹೆಗಡೆ ಆಲ್ಮನೆ, ಕಾರ್ಯದರ್ಶಿ ಡಿ.ಎ. ಹೆಗಡೆ, ಕೋಶಾಧ್ಯಕ್ಷ ಲಕ್ಷ್ಮಣ ಶಾನಭಾಗ, ಇಂದಿರಾ ಬೈಲಕೇರಿ, ಜಾನಕಿ ಹೆಗಡೆ, ಡಿ.ಎಸ್. ಹೆಗಡೆ, ಸದಸ್ಯರೂ, ಅನೇಕ ಶಿಷ್ಯರೂ ಭಾಗವಹಿಸಿದ್ದರು.
ಮಠದ ಸುತ್ತ ಪರಿಸರದಲ್ಲಿ ವಿವಿಧ ಗಿಡಗಳನ್ನು ನೆಡಲಾಯಿತು.