

ನಾಪೋಕ್ಲು: ದೇಶಕ್ಕೆ ಬಂದೋದಗುವ ತೊಂದರೆಗಳನ್ನು ನಿವಾರಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ದೇವಾಲಯಗಳಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಮುಜರಾಯಿ ದೇವಾಲಯದ ಅಧಿನಾಯಕ ಒಳಪಟ್ಟ ಸಮಿಪದ ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ದತ್ತಿ ಆಯುಕ್ತರ ಸುತ್ತೋಲೆಯಲ್ಲಿ ತಿಳಿಸಿರುವಂತೆ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ಭಯೋತ್ಪಾದಕರ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ನಡೆದ ಸೇನಾ ಕಾರ್ಯಾಚರಣೆಯು ಯಶಸ್ವಿಯಾಗಿ ನಿರ್ವಹಿಸಿದ ನಮ್ಮ ಭಾರತೀಯ ಹೆಮ್ಮೆಯ ಸೇನಾ ಯೋಧರಿಗೆ ಮತ್ತಷ್ಟು ಶಕ್ತಿಯನ್ನು ಶ್ರೀ ಮಹಾಲಿಂಗೇಶ್ವರ ಅನುಗ್ರಹಿಸಲಿ ಎಂದು ಕ್ಷೇತ್ರದ ಮುಖ್ಯ ಪುರೋಹಿತರಾದ ದೇವಿಪ್ರಸಾದ್ ಪ್ರಾರ್ಥನೆ ಹಾಗೂ ಸಂಕಲ್ಪ, ರುದ್ರಾಭಿಷೇಕ ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿ ದೇಶವಾಸಿಗಳಿಗೆ ಒಳಿತಾಗಲಿದೆ ಎಂದರು. ಈ ಸಂದರ್ಭ ಭಕ್ತಾದಿಗಳು ಹಾಜರಿದ್ದರು.