

ಮದ್ದೂರು : ಲೋಕ ಕಲ್ಯಾಣಕ್ಕಾಗಿ ಹಾಗೂ 3ನೇ ಆಷಾಢ ಶುಕ್ರವಾರದ ಅಂಗವಾಗಿ ಪಟ್ಟಣದ ಪುರಾಣ ಪ್ರಸಿದ್ಧ ಶಕ್ತಿ ದೇವತೆ ಶ್ರೀ ಮದ್ದೂರಮ್ಮನ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಆಷಾಢ ಶುಕ್ರವಾರದ ಅಂಗವಾಗಿ ದೇವಿಗೆ ವಿಶೇಷ ಅಭಿಷೇಕ, ಬೆಣ್ಣೆ ಅಲಂಕಾರ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರು ದೇವರಿಗೆ ನಿಂಬೆಹಣ್ಣಿನ ಆರತಿ, ಬೆಲ್ಲದ ಆರತಿ ಮಾಡಿದರು. ದೇವರಿಗೆ ಮಡಿಲಕ್ಕಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಕೃಪೆಗೆ ಒಳಾಗದರು.
ಸಮಾಜ ಸೇವಕ ದೀಪಿಕಾ ಯಶವಂತ್ ದಂಪತಿ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದರು. ಅನ್ನ, ಸಾಂಬಾರ್, ಪಾಯಸ, ಬೂಂದಿ ಹಾಗೂ ತಡಣಿಕಾಳು ಗೊಜ್ಜು ಉಣ ಬಡಿಸಲಾಯಿತು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಸಹಸ್ರಾರು ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು.
ಸಮಾಜ ಸೇವಕ ಎಂ.ಯಶವಂತ ಮಾತನಾಡಿ, ಆಷಾಢ ಶುಕ್ರವಾರದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಲೋಕ ಕಲ್ಯಾಣಕ್ಕಾಗಿ, ರೈತರಿಗೆ ಹಾಗೂ ಗಡಿ ಕಾಯುವ ವೀರ ಸೈನಿಕರಿಗೆ ಒಳಿತಾಗಲೆಂದು ಪ್ರಾರ್ಥಿಸಿ ದೇಗುಲದ ಆವರಣದಲ್ಲಿ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದರು.
ಅಭಿನಂದನ್, ಉಮೇಶ್, ಪ್ರಕಾಶ್, ಎಂ.ಐ.ಕುಮಾರ್, ಮೋಹನ್, ದಿವ್ಯಾಕುಮಾರ್, ಗೋಪಾಲ್, ಅಂಕಪ್ಪ, ಶ್ರೀನಿವಾಸ್, ಶ್ರೀಧರತ್ ಮತ್ತಿತರು ಇದ್ದರು.