ವಿಶೇಷ ಕಾರ್ಯಾಗಾರ

18 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಾವು ಡೋಪಮೈನ್​ ಮತ್ತು ಸಿರೊಟೋನಿನ್​ ನಡುವೆ ಸಮತೋಲನ ಹೊಂದಬೇಕು. ಮೆದುಳಿನ ಕಾರ್ಯ ಅರ್ಥ ಮಾಡಿಕೊಳ್ಳುವುದರಿಂದ ಉತ್ತಮ ಜೀವನ ನಡೆಸಲು ಸಹಾಯವಾಗುತ್ತದೆ ಎಂದು ಎಸ್​ಡಿಎಂ ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಚಿದೇಂದ್ರ ಶೆಟ್ಟರ್​ ಹೇಳಿದರು.

ನಗರದ ಎಸ್​ಡಿಎಂ ವೈದ್ಯಕಿಯ ಮಹಾವಿದ್ಯಾಲಯದ ಶರೀರ ಕ್ರಿಯಾ ಶಾಸ್ತ್ರ ವಿಭಾಗದಿಂದ ಹದಿಹರೆಯದಲ್ಲಿ ಉದ್ಬವಿಸುವ ಪ್ರಶ್ನೆಗಳು ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಗಾರ ಹದಿಹರೆಯದವರ ಕೌಶಲ ಮತ್ತು ಜ್ಞಾನ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದರು.

ಎಸ್​ಡಿಎಂ ವಿಶ್ವ ವಿದ್ಯಾಲಯದ ಹಣಕಾಸು ಸಚಿವ ವಿ.ಜಿ. ಪ್ರಭು, ವೈದ್ಯಕಿಯ ಕಾಲೇಜಿನ ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ, ಪ್ರಾಧ್ಯಾಪಕರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net