

ಚಡಚಣ (ಗ್ರಾ): ಸಮೀಪದ ಬರಡೋಲ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಗ್ರಾಮ ಸಭೆಯಲ್ಲಿ 400 ಅರ್ಹ ಲಾನುಭವಿಗಳಿಗೆ ಮನೆಗಳನ್ನು ಹಂಚಲು ನಿರ್ಧರಿಸಲಾಯಿತು.
ಪಿಡಿಒ ಶ್ರೀಕಾಂತ ಅಂಬಿಗೇರ ಮಾತನಾಡಿ, ಬಸವ ವಸತಿ ಯೋಜನೆಯಡಿ ಸರ್ಕಾರ 2024-25 ನೇ ಸಾಲಿಗೆ ಹೆಚ್ಚುವರಿಯಾಗಿ 278 ಮನೆ ಮಂಜೂರು ಮಾಡಿದ್ದು, ಅದರಲ್ಲಿ 248 ಸಾಮಾನ್ಯ ವರ್ಗ, ಅಲ್ಪ ಸಂಖ್ಯಾತರಿಗೆ 30 ಮನೆ ಮೀಸಲಿರಿಸಲಾಗಿದೆ. ಅಂಬೇಡ್ಕರ್ ವಸತಿ ಯೋಜನೆಯಡಿ 122 ಮನೆ ಮಂಜೂರಾಗಿದ್ದು, ಪರಿಶಿಷ್ಟ ಜಾತಿಯ ಲಾನುಭವಿಗಳಿಗೆ 101 ಹಾಗೂ ಪರಿಶಿಷ್ಟ ಪಂಗಡದ ಲಾನುಭವಿಗಳಿಗೆ 21 ಮನೆ ಹಂಚಲಾಗುವುದು. ಸರ್ಕಾರದ ಆದೇಶದನುಗುಣವಾಗಿ ಗ್ರಾಮಸಭೆ ಮೂಲಕ ಅರ್ಹ ಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳನ್ನು ಹಂಚಲಾಗುತ್ತಿದೆ ಎಂದು ತಿಳಿಸಿದರು.
ನೋಡಲ್ ಅಧಿಕಾರಿ ಎಂ.ಎಸ್.ಗಂಗನಳ್ಳಿ ಮಾತನಾಡಿ, ಗ್ರಾಮಸಭೆಯ ಕುರಿತು ಮುಂಚಿತವಾಗಿ ಸಾರ್ವಜನಿಕರಿಗೆ ಮಾಹಿತಿ ನೀಲಾಗಿದೆ. ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಗುಡಿಸಲು ಮುಕ್ತ ಗ್ರಾಮವನ್ನಾಗಿಸಲು ಸಾರ್ವಜನಿಕರು ಸಹಕರಿಸಬೇಕು ಎಂದರು.
ಗ್ರಾಮ ಸಭೆಯಲ್ಲಿ ಚರ್ಚೆಯ ನಂತರ ಬಡವರು, ಹಿಂದುಳಿದವರು ಹಾಗೂ ಅಲ್ಪ ಸಂಖ್ಯಾತರಿಗೆ ಗ್ರಾಮಸ್ಥರ ಒಪ್ಪಿಗೆ ಮೇರೆಗೆ ಮನೆ ಹಂಚಿಕೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಪುರಾಯ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಾಂದಬಿಬಿ ಬಡಿಗೇರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಲಾಲಸಾಬ ಬಡಿಗೇರ, ಶಿವರಾಯಗೌಡ ಬಿರಾದಾರ, ಸುರೇಶ ಪಟ್ಟಣಶೆಟ್ಟಿ, ಪಾಂಡುರಂಗ ಭಜಂತ್ರಿ ಹಾಗೂ ಬರಡೋಲ, ವಿಠ್ಠಲ ನಗರ, ಗೋಡಿಹಾಳ ಗ್ರಾಮಸ್ಥರು ಉಪಸ್ಥಿತರಿದ್ದರು.