

ಗೋಕರ್ಣ: ವ್ಯಾಸ ಪೌರ್ಣಿಮೆ ನಿಮಿತ್ತ ಕ್ಷೇತ್ರದ ವೇದವಿದರಿಂದ ಚಂದ್ರೋದಯ ಪರ್ವಕಾಲದಲ್ಲಿ ಶ್ರೀಮಾರ್ಕಾಂಡೇಯ ಲಿಂಗ ಸನ್ನಿಧಿಯಲ್ಲಿ ವಿಶೇಷ ವೇದಸಭೆ ಆಯೋಜಿಸಲಾಯಿತು.
ಬ್ರಹ್ಮೈಕ್ಯ ಶ್ರೀಜಯರಾಮ ಗುರುಗಳ ಸ್ಮರಣಾರ್ಥ ಮಹರ್ಷಿ ದೈವರಾತರು ಏಳು ದಶಕದ ಹಿಂದೆ ಪ್ರಾರಂಭಿಸಿದ್ದ ನಾಲ್ಕು ವೇದಗಳ ವಿಶೇಷ ಸಭೆಯನ್ನು ಇಲ್ಲಿನ ಹಿರಿಯ ಮತ್ತು ಕಿರಿಯ ವೈದಿಕರು ಇಂದಿಗೂ ನಡೆಸುತ್ತ ಬಂದಿದ್ದಾರೆ. ಪ್ರಾತಃಕಾಲ ಜಯರಾಮಗುರುಗಳ ಬ್ರಹ್ಮೈಕ್ಯ ಸ್ಥಳದಲ್ಲಿ ವೇದೋಕ್ತ ಆರಾಧನೆ ಕೈಗೊಳ್ಳಲಾಯಿತು.
ವೇದಸಭೆಯಲ್ಲಿ ವೇ.ಯಜ್ಞಪತಿ ಚಿತ್ರಿಗೆಮಠ, ವೇ.ಚಂದ್ರಶೇಖರ ಅಡಿ, ವೇ. ನಾಗಾನಂದ ಪುರಾಣಿಕ ಮಾರಿಗೋಳಿ, ವೇ.ನಾಗರಾಜ ಉಪಾಧ್ಯ, ವೇ. ವಿಶ್ವನಾಥ ಪ್ರಸಾದ ರಮಣಿ, ವೇ.ನಾಗರಾಜ ಗಾಯತ್ರಿ, ವೇ.ಶ್ರೀನಾಗ ಅಡಿ ಮತ್ತು ಯುವವೈದಿಕರು ಭಾಗವಹಿಸಿ ವೇದಘೊಷ ಸಮರ್ಪಿಸಿದರು. ವೇ.ಸತ್ಯನಾರಾಯಣ ಮಾರ್ಕಾಂಡೆ ಮುಂತಾದವರು ಸಂಘಟಿಸಿದರು.