ಬೆಟ್ಟದಲ್ಲಿ ಚೇಳುಗಳ ಹಿಂಡು, ಅವುಗಳ ಜತೆಗೇ ಜನರ ಚೆಲ್ಲಾಟ!

Scorpion
Published on

ಯಾದಗಿರಿ: ಜಿಲ್ಲೆಯ ಗುರಮಠಕಲ್ ತಾಲೂಕಿನ‌ ಕಂದಕೂರ ಗ್ರಾಮದಲ್ಲಿನ‌ ನಾಗರ ಪಂಚಮಿ ಹಬ್ಬವಾದ ಮಂಗಳವಾರದಂದು ಜನತೆ ವಿಷಪೂರಿತ ಚೇಳುಗಳೊಡನೆ ಆಟವಾಡಿ ಸಂಭ್ರಮಿಸಿದರು. ಕಂದಕೂರ ಗ್ರಾಮದ ಕೊಂಡಾಮ್ಮಾಯಿ ಬೆಟ್ಟದಲ್ಲಿ ಪ್ರತಿವರ್ಷ ನಾಗರಪಂಚಮಿ ಹಬ್ಬದಂದು ಈ ವಿಸ್ಮಯ ನಡೆಯುತ್ತದೆ.

ನಾಗರಪಂಚಮಿಯ ದಿನ ದೇಶಾದ್ಯಂತ ನಾಗರಾಜನಿಗೆ ಪೂಜೆ ನಡೆದರೆ, ಈ ಗ್ರಾಮದಲ್ಲಿ ಚೇಳಿನ‌ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ ಅಂದು ಈ ಬೆಟ್ಟದಲ್ಲಿನ ಒಂದು ಸಣ್ಣ ಕಲ್ಲು ತೆಗೆದರೂ ಸಾಕು ಹಿಂಡು ಹಿಂಡಾಗಿ ಚೇಳುಗಳು ಕಾಣಸಿಗುತ್ತವೆ. ಜನತೆ ಅವುಗಳನ್ನು ಹಿಡಿದು ಆಟವಾಡುತ್ತಾರೆ. ಆದರೆ ಅದು ಯಾರಿಗೂ ಕಚ್ಚದಿರುವುದು ವಿಜ್ಞಾನ ಲೋಕಕ್ಕೆ ಸವಾಲಾಗಿದೆ.

ಈ ವಿಸ್ಮಯ ವೀಕ್ಷಿಸಲೆಂದೇ ಯಾದಗಿರಿ ಜಿಲ್ಲೆ ಸೇರಿದಂತೆ ನೆರೆಯ ತೆಲಂಗಾಣ ರಾಜ್ಯದಿಂದ ಸಾವಿರಾರು ಜನರು ಈ ಬೆಟ್ಟಕ್ಕೆ ಆಗಮಿಸುತ್ತಾರೆ. ಅಕಸ್ಮಾತ್ ಚೇಳು ಕಚ್ಚಿದರೂ ಕೊಂಡಮ್ಮಾಯಿ ಹೆಸರು ಹೇಳಿ ಆಧಾರ ಹಚ್ಚಿಕೊಂಡರೆ ನೋವು ಮಾಯವಾಗುತ್ತದೆ. ಅಲ್ಲದೆ ಪಂಚಮಿ ಮರುದಿನ ಈ ಚೇಳುಗಳು ಬೆಟ್ಟದಲ್ಲಿ ಕಾಣುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net