ವಿಶೇಷ ರೈಲು ಸಂಚಾರ

New Train
Published on

ಹುಬ್ಬಳ್ಳಿ : ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ಯಶವಂತಪುರ - ಬೆಳಗಾವಿ ಮತ್ತು ಎಸ್​ಎಂವಿಟಿ ಬೆಂಗಳೂರು- ವಿಜಯಪುರ ನಿಲ್ದಾಣಗಳ ಮಧ್ಯೆ ವಿಶೇಷ ರೈಲು ಸಂಚಾರ ನಡೆಸಲು ನೈಋತ್ಯ ರೈಲ್ವೆ ವಲಯ ನಿರ್ಧರಿಸಿದೆ.

ಸೆ. 5 ರಂದು ರಾತ್ರಿ 7.30ಕ್ಕೆ ಯಶವಂತಪುರದಿಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 7.15ಕ್ಕೆ ಬೆಳಗಾವಿ ತಲುಪಲಿದೆ. ಮರಳಿ ಬೆಳಗಾವಿಯಿಂದ ಸೆ. 6 ರಂದು ಬೆಳಗ್ಗೆ 8.45ಕ್ಕೆ ಹೊರಡುವ ರೈಲು, ಅದೇ ದಿನ ರಾತ್ರಿ 8 ಗಂಟೆಗೆ ಯಶವಂತಪುರ ತಲುಪಲಿದೆ.

ಮತ್ತೊಂದು ರೈಲು ಸೆ. 6ರಂದು ರಾತ್ರಿ 10.15ಕ್ಕೆ ಯಶವಂತಪುರದಿಂದ ಹೊರಟು, ಮಾರನೇ ದಿನ ಬೆಳಗ್ಗೆ 10.15ಕ್ಕೆ ಬೆಳಗಾವಿ ತಲುಪಲಿದೆ. ಮರಳಿ ಬೆಳಗಾವಿಯಿಂದ ಸೆ. 8ರಂದು ಸಂಜೆ 5.30ಕ್ಕೆ ಹೊರಡುವ ರೈಲು, ಮಾರನೇ ದಿನ ಬೆಳಗಿನಜಾವ 4.30ಕ್ಕೆ ಯಶವಂತಪುರ ತಲುಪಲಿದೆ.

ಸೆ. 5 ಮತ್ತು 7ರಂದು ರಾತ್ರಿ 9 ಗಂಟೆಗೆ ಹೊರಡುವ ಎಸ್​ಎಂವಿಟಿ ಬೆಂಗಳೂರು ರೈಲು, ಮಾರನೇ ದಿನ ಬೆಳಗಿನಜಾವ 2.05ಕ್ಕೆ ವಿಜಯಪುರ ನಿಲ್ದಾಣ ತಲುಪಲಿದೆ. ಮರಳಿ ಸೆ. 6 ಮತ್ತು 8ರಂದು ರಾತ್ರಿ 7 ಗಂಟೆಗೆ ವಿಜಯಪುರದಿಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 11.15ಕ್ಕೆ ಎಸ್​ಎಂವಿಟಿ ಬೆಂಗಳೂರು ನಿಲ್ದಾಣ ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net