

ಹುಬ್ಬಳ್ಳಿ : ಛತ್ ಉತ್ಸವದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಲಯವು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಭಗತ್ ಕಿ ಕೋಠಿ ನಿಲ್ದಾಣಗಳ ಮಧ್ಯೆ ಮೂರು ಟ್ರಿಪ್ ವಿಶೇಷ ರೈಲು ಸಂಚಾರ ಆರಂಭಿಸಿದೆ.
ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ನ. 12, 19 ಮತ್ತು 26ರಂದು (ಮಂಗಳವಾರ) ಮಧ್ಯಾಹ್ನ 3 ಗಂಟೆಗೆ ಹೊರಡುವ ರೈಲು, ಮಾರನೇ ದಿನ ರಾತ್ರಿ ಭಗತ್ ಕಿ ಕೋಠಿ ನಿಲ್ದಾಣ ತಲುಪಲಿದೆ.
ಭಗತ್ ಕಿ ಕೋಟಿ ನಿಲ್ದಾಣದಿಂದ ನ. 14, 21 ಮತ್ತು 28ರಂದು (ಗುರುವಾರ)ಬೆಳಗಿನ ಜಾವ 12.30ಕ್ಕೆ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 6.45ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.