ವಿಶೇಷ ರೈಲು ಪ್ರವಾಸಕ್ಕೆ ಬುಕ್ಕಿಂಗ್ ಆರಂಭ

883f56e3446f241d30ef7f96ac858db0
Published on

ಮೈಸೂರು: ರೈಲ್ವೆ ಸಚಿವಾಲಯದ ಅಡಿಯಲ್ಲಿರುವ ಸಾರ್ವಜನಿಕ ಉದ್ಯಮವಾದ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ವತಿಯಿಂದ ರಾಮನವಮಿ ವಿಶೇಷ ಪುಣ್ಯ ತೀರ್ಥ ಯಾತ್ರೆ ಹೆಸರಿನಲ್ಲಿ ವಿಶೇಷ ರೈಲು ಪ್ರವಾಸವನ್ನು ಆಯೋಜಿಸಿದೆ.
10 ರಾತ್ರಿ, 11  ಹಗಲುಗಳ ಪ್ರವಾಸಿ ರೈಲು ಏಪ್ರಿಲ್ 16ರಂದು ಬೆಂಗಳೂರು ವೈಟ್‌ಫೀಲ್ಡ್ ರೈಲು ನಿಲ್ದಾಣದಿಂದ ಹೊರಡಲಿದೆ. ಈ ರೈಲಿನಲ್ಲಿ ಪುರಿ- ಕೋನಾರ್ಕ- ಕೊಲ್ಕತ್ತಾ- ಗಯಾ- ವಾರಾಣಸಿ- ಅಯೋಧ್ಯೆ-ಪ್ರಯಾಗರಾಜ್, ದೇವಸ್ಥಾನ ಮತ್ತು ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದಾಗಿದೆ. ಈ ಪ್ರವಾಸಕ್ಕೆ ತಗಲುವ ವೆಚ್ಚ  10,410 ರೂ. ಆಗಿದೆ.
ಸ್ಲೀಪರ್ ಕ್ಲಾಸ್ ರೈಲು ಪ್ರಯಾಣ, ರಾತ್ರಿ ಉಳಿಯಲು ಅಥವಾ ಸ್ನಾನ ಮಾಡಲು ಧರ್ಮಶಾಲಾ, ಹಾಲ್, ಡಾರ್ಮಿಟೋರೀಸ್ ವ್ಯವಸ್ಥೆ, ಬೆಳಗ್ಗಿನ ಟೀ-ಕಾಫಿ, ಉಪಾಹಾರ, ಮಧ್ಯಾಹ್ನ ಮತ್ತು  ರಾತ್ರಿ ಊಟದೊಂದಿಗೆ ದಿನಕ್ಕೆ ಒಂದು ಲೀಟರ್ ಕುಡಿವ ನೀರಿನ ಬಾಟಲ್ ದೊರೆಯಲಿದೆ. ಸಾಮಾನ್ಯ ಬಸ್‌ಗಳಲ್ಲಿ  ಸ್ಥಳೀಯ ಸ್ಥಳಗಳ ವೀಕ್ಷಣೆ, ಪ್ರವಾಸಿ ವ್ಯವಸ್ಥಾಪಕರು ಮತ್ತು ಭದ್ರತೆ ಸಿಬ್ಬಂದಿ, ಪ್ರಯಾಣ ವಿಮೆ ಸೌಲಭ್ಯ ಇರಲಿದೆ.
ಈ ಪ್ರವಾಸಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಿ ನೌಕರರು ಎಲ್‌ಟಿಸಿ ಸೌಲಭ್ಯ ಕೂಡ ಪಡೆಯಬಹುದು. ಈ ಪ್ರವಾಸಕ್ಕಾಗಿ ಐಆರ್‌ಸಿಟಿಸಿ ಕೌಂಟರ್‌ಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಡಿಡಿಡಿ.ಜ್ಟ್ಚಿಠ್ಚಿಠಿಟ್ಠ್ಟಜಿಞ.್ಚಟಞ  ವೆಬ್‌ಸೈಟ್ ಮೂಲಕ ಬುಕಿಂಗ್ ಪ್ರಾರಂಭಿಸಲಾಗಿದೆ.
ಬುಕಿಂಗ್, ವಿವರಗಳಿಗಾಗಿ ಪ್ರಾದೇಶಿಕ ಕಚೇರಿ ರಾಜಾಜಿನಗರ, ಬೆಂಗಳೂರು: 8595931291, 8595931290, ಬೆಂಗಳೂರು ರೈಲು ನಿಲ್ದಾಣ: 8595931292, ಮೈಸೂರು ರೈಲು ನಿಲ್ದಾಣ: 8595931294, ಹುಬ್ಬಳ್ಳಿ ರೈಲು ನಿಲ್ದಾಣ: 8595931293 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net