ಪಂಡರಾಪುರಕ್ಕೆ ವಿಶೇಷ ರೈಲು

PANDARAPUR NEW
Published on

ಹುಬ್ಬಳ್ಳಿ: ಕಾರ್ತಿಕ ಏಕಾದಶಿ ಅಂಗವಾಗಿ ಎಸ್​ಎಸ್​ಎಸ್ ಹುಬ್ಬಳ್ಳಿ ಮತ್ತು ಪಂಡರಾಪುರ ಮಧ್ಯೆ 6 ಟ್ರಿಪ್ ವಿಶೇಷ ಕಾಯ್ದಿರಿಸದ (ಅನ್ ರಿಸರ್ವಡ್) ರೈಲು ಸಂಚಾರ ಪ್ರಾರಂಭಿಸಲಾಗಿದೆ.

ಅ. 29, 30, 31 ಮತ್ತು ನ. 1, 2, 3 ರಂದು ಬೆಳಗಿನಜಾವ 5.10ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು, ಅದೇ ದಿನ ಸಂಜೆ 4 ಗಂಟೆಗೆ ಪಂಡರಾಪುರ ತಲುಪಲಿದೆ. ಅಂದು ಸಂಜೆ 6 ಗಂಟೆಗೆ ಪಂಡರಾಪುರದಿಂದ ಹೊರಡುವ ರೈಲು, ಮಾರನೇ ದಿನ ಬೆಳಗಿನಜಾವ 4 ಗಂಟೆಗೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net