

ಹುಬ್ಬಳ್ಳಿ : ದಸರಾ ಹಬ್ಬದ ಅಂಗವಾಗಿ ನೈಋತ್ಯ ರೈಲ್ವೆ ಸರ್ ಎಂ. ವಿಶ್ವೇಶ್ವರಯ್ಯ ಟರ್ವಿುನಲ್ ಬೆಂಗಳೂರು, ಬೆಳಗಾವಿ ಮತ್ತು ಮೈಸೂರು ಮಧ್ಯೆ ವಿಶೇಷ ರೈಲು ಸಂಚಾರ ಆರಂಭಿಸಲಿದೆ.
ಎಸ್ಎಂವಿಟಿ ಬೆಂಗಳೂರು-ಬೆಳಗಾವಿ-ಮೈಸೂರು ಎಕ್ಸ್ಪ್ರೆಸ್ ರೈಲು ಒಂದು ಟ್ರಿಪ್ ಸಂಚರಿಸಲಿದೆ. ಸೆ. 30ರಂದು ಸಂಜೆ 7 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ ಬೆಳಗಾವಿಗೆ ತಲುಪಲಿದೆ.
ಅ. 1ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 7.45 ಮೈಸೂರು ತಲುಪಲಿದೆ.
ಮೈಸೂರು-ಬೆಳಗಾವಿ- ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲು ಒಂದು ಟ್ರಿಪ್ ಸಂಚರಿಸಲಿದೆ. ಅ. 2ರಂದು ರಾತ್ರಿ 11.45ಕ್ಕೆ ಮೈಸೂರಿನಿಂದ ಹೊರಡುವ ರೈಲು, ಮಾರನೇ ದಿನ ಮಧ್ಯಾಹ್ನ 12.30ಕ್ಕೆ ಬೆಳಗಾವಿ ತಲುಪಲಿದೆ.
ಅ. 3ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಡುವ ರೈಲು, ಮಾರನೇ ದಿನ ಬೆಳಗಿನಜಾವ 5 ಗಂಟೆಗೆ ಬೆಂಗಳೂರಿನ ಎಸ್ಎಂವಿಟಿ ಟರ್ವಿುನಲ್ ತಲುಪಲಿದೆ. ಎಸ್ಎಂವಿಟಿ ಬೆಂಗಳೂರು-ಬೆಳಗಾವಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ರೈಲು ಒಂದು ಟ್ರಿಪ್ ಸಂಚರಿಸಲಿದೆ. ಅ. 4ರಂದು ಸಂಜೆ 7 ಗಂಟೆಗೆ ಬೆಂಗಳೂರಿನ ಎಸ್ಎಂವಿಟಿ ಟರ್ವಿುನಲ್ನಿಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ.
ಅ. 5ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಡುವ ರೈಲು, ಮಾರನೇ ದಿನ ಬೆಳಗಿನಜಾವ 5 ಗಂಟೆಗೆ ಬೆಂಗಳೂರಿನ ಎಸ್ಎಂವಿಟಿ ಟರ್ವಿುನಲ್ ತಲುಪಲಿದೆ.