

ಹುಬ್ಬಳ್ಳಿ : ದೀಪಾವಳಿ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಲಯ ವಿಶೇಷ ರೈಲುಗಳ ಸಂಚಾರ ಸೌಲಭ್ಯ ಕಲ್ಪಿಸಿದೆ.
ಎಸ್ಎಸ್ಎಸ್ ಹುಬ್ಬಳ್ಳಿ - ಮಂಗಳೂರು ಜಂಕ್ಷನ್ - ಯಶವಂತಪುರ ಎಕ್ಸ್ಪ್ರೆಸ್ ಸ್ಪೇಷಲ್ (1 ಟ್ರಿಪ್) ರೈಲು ಹುಬ್ಬಳ್ಳಿ ನಿಲ್ದಾಣದಿಂದ ಅ. 17ರಂದು ಸಂಜೆ 4 ಗಂಟೆಗೆ ಹೊರಟು, ಮಾರನೇ ದಿನ ಬೆಳಗ್ಗೆ 11.15ಕ್ಕೆ ಮಂಗಳೂರು ತಲುಪಲಿದೆ. ಈ ರೈಲು 18ರಂದು ಮಧ್ಯಾಹ್ನ 2.35ಕ್ಕೆ ಮಂಗಳೂರಿನಿಂದ ಹೊರಟು, ಅದೇ ದಿನ ರಾತ್ರಿ 11.15ಕ್ಕೆ ಯಶವಂತಪುರ ತಲುಪಲಿದೆ.
ಬೆಳಗಾವಿ- ಎಸ್ಎಂವಿಟಿ ಬೆಂಗಳೂರು -ಬೆಳಗಾವಿ ಎಕ್ಸ್ಪ್ರೆಸ್ ಸ್ಪೇಷಲ್ ರೈಲು (1 ಟ್ರಿಪ್) 18ರಂದು ಬೆಳಗ್ಗೆ 8 ಗಂಟೆಗೆ ಬೆಳಗಾವಿಯಿಂದ ಹೊರಟು, ಅದೇ ದಿನ ರಾತ್ರಿ 7.45ಕ್ಕೆ ಬೆಂಗಳೂರು ತಲುಪಲಿದೆ. ಮರಳಿ ಅ. 18ರಂದು ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಹೊರಟು, ಮಾರನೇ ದಿನ ಬೆಳಗ್ಗೆ 8.35ಕ್ಕೆ ಬೆಳಗಾವಿ ತಲುಪಲಿದೆ.