ವಿಶೇಷ ರೈಲು ಸಂಚಾರ

Indian-Railway-Canceled-30-Train
Published on

ಹುಬ್ಬಳ್ಳಿ : ದೀಪಾವಳಿ ಅಂಗವಾಗಿ ನೈಋತ್ಯ ರೈಲ್ವೆ ವಲಯವು ಹುಬ್ಬಳ್ಳಿ-ಬೆಂಗಳೂರು ಮತ್ತು ಹುಬ್ಬಳ್ಳಿ-ವಿಜಯಪುರ ಮಧ್ಯೆ ವಿಶೇಷ ರೈಲು ಸಂಚಾರ ಪ್ರಾರಂಭಿಸಿದೆ.

ಎಸ್​ಎಸ್​ಎಸ್ ಹುಬ್ಬಳ್ಳಿ-ಎಸ್​ಎಂವಿಟಿ ಬೆಂಗಳೂರು ಎಕ್ಸ್​ಪ್ರೆಸ್ ಸ್ಪೇಷಲ್ (ಒನ್ ವೇ) ರೈಲು ಅ. 17ರಂದು ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು, ರಾತ್ರಿ 8 ಗಂಟೆಗೆ ಬೆಂಗಳೂರು ನಿಲ್ದಾಣ ತಲುಪಲಿದೆ.

ಎಸ್​ಎಂವಿಟಿ ಬೆಂಗಳೂರು- ವಿಜಯಪುರ- ಎಸ್​ಎಂವಿಟಿ ಬೆಂಗಳೂರು ಎಕ್ಸ್​ಪ್ರೆಸ್ ಸ್ಪೇಷಲ್ (ಒಂದು ಟ್ರಿಪ್) ರೈಲು ಅ. 17ರಂದು ರಾತ್ರಿ 10 ಗಂಟೆಗೆ ಬೆಂಗಳೂರಿನಿಂದ ಹೊರಟು, ಮಾರನೇ ದಿನ ಮಧ್ಯಾಹ್ನ 2.05ಕ್ಕೆ ವಿಜಯಪುರ ತಲುಪಲಿದೆ. ಮರಳಿ ಅ. 22ರಂದು ರಾತ್ರಿ 7 ಗಂಟೆಗೆ ವಿಜಯಪುರದಿಂದ ಹೊರಟು, ಮಾರನೇ ದಿನ ಬೆಳಗ್ಗೆ 11.15ಕ್ಕೆ ಬೆಂಗಳೂರು ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net