ವಿಶೇಷ ರೈಲು ಸಂಚಾರ

New Train
Published on

ಹುಬ್ಬಳ್ಳಿ : ಸ್ವಾತಂತ್ರ್ಯ ದಿನದ ರಜೆ ಅಂಗವಾಗಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ಎಸ್​ಎಸ್​ಎಸ್-ಹುಬ್ಬಳ್ಳಿ- ಎಸ್​ಎಂವಿಟಿ ಬೆಂಗಳೂರು ಮತ್ತು ಎಸ್​ಎಂವಿಟಿ ಬೆಂಗಳೂರು-ವಿಜಯಪುರ ಮಧ್ಯೆ ವಿಶೇಷ ರೈಲು ಸಂಚಾರ ಪ್ರಾರಂಭಿಸಲಾಗಿದೆ.

ಎಸ್​ಎಸ್​ಎಸ್ ಹುಬ್ಬಳ್ಳಿ-ಎಸ್​ಎಂವಿಟಿ ಬೆಂಗಳೂರು ಒನ್ ವೇ ಎಕ್ಸ್​ಪ್ರೆಸ್ ರೈಲು ಆ. 14ರಂದು ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು, ಅದೇ ದಿನ ರಾತ್ರಿ 7.45ಕ್ಕೆ ಎಸ್​ಎಂವಿಟಿ ಬೆಂಗಳೂರು ನಿಲ್ದಾಣ ತಲುಪಲಿದೆ.

ಎಸ್​ಎಂವಿಟಿ ಬೆಂಗಳೂರು- ವಿಜಯಪುರ- ಎಸ್​ಎಂವಿಟಿ ಬೆಂಗಳೂರು ಬೆಂಗಳುರು ಎಕ್ಸ್​ಪ್ರೆಸ್ ಸ್ಪೇಷಲ್ ರೈಲು ಆ. 14ರಂದು ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಹೊರಟು, ಮಾರನೇ ದಿನ 10.45ಕ್ಕೆ ವಿಜಯಪುರ ತಲುಪಲಿದೆ. ವಿಜಪಯರದಿಂದ ಆ. 17ರಂದು ಸಂಜೆ 5.30ಕ್ಕೆ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 8.10ಕ್ಕೆ ಬೆಂಗಳೂರು ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net