

ಹುಬ್ಬಳ್ಳಿ : ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ನೈಋತ್ಯ ರೈಲ್ವೆ ವಲಯವು ಎಸ್ಎಸ್ಎಸ್ ಹುಬ್ಬಳ್ಳಿ- ಕನ್ಯಾಕುಮಾರಿ ಮಧ್ಯೆ 3 ಟ್ರಿಪ್ ವಿಶೇಷ ರೈಲು ಸಂಚಾರ ಆರಂಭಿಸಲಿದೆ.
ಡಿ. 30, 2025ರ ಜ. 6 ಮತ್ತು 13ರಂದು ಮಧ್ಯಾಹ್ನ 4 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು, ಮಾರನೇ ದಿನ ಮಧ್ಯಾಹ್ನ 3.20ಕ್ಕೆ ಕನ್ಯಾಕುಮಾರಿ ತಲುಪಲಿದೆ. ಡಿ. 31, 2025ರ ಜ. 7 ಮತ್ತು 14ರಂದು ರಾತ್ರಿ 7.10ಕ್ಕೆ ಕನ್ಯಾಕುಮಾರಿಯಿಂದ ಹೊರಡುವ ರೈಲು, ಮಾರನೇ ದಿನ ರಾತ್ರಿ 7.35ಕ್ಕೆ ಹುಬ್ಬಳ್ಳಿ ತಲುಪಲಿದೆ.