ವಿಶೇಷ ರೈಲು ಸಂಚಾರ

New Train
Published on

ಹುಬ್ಬಳ್ಳಿ :ಕ್ರಿಸ್​ಮಸ್​ ಹಾಗೂ ಹೊಸ ವರ್ಷಾಚರಣೆ ಅಂಗವಾಗಿ ನೈಋತ್ಯ ರೈಲ್ವೆ ವಲಯ ಎಸ್​ಎಸ್​ಎಸ್ ಹುಬ್ಬಳ್ಳಿ- ಎಸ್​ಎಂವಿಟಿ ಬೆಂಗಳೂರು ಹಾಗೂ ವಾಸ್ಕೊ- ಎಸ್​ಎಂವಿಟಿ ಬೆಂಗಳೂರು ಮಧ್ಯೆ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದೆ.

ಎಸ್​ಎಸ್​ಎಸ್ ಹುಬ್ಬಳ್ಳಿ- ಎಸ್​ಎಂವಿಟಿ ಬೆಂಗಳೂರು ಒನ್ ವೇ ಸ್ಪೇಷಲ್ ರೈಲು ಡಿ. 20 ರಂದು ಬೆಳಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು, ಅದೇ ದಿನ ಮಧ್ಯಾಹ್ನ 4.15ಕ್ಕೆ ಬೆಂಗಳೂರು ತಲುಪಲಿದೆ.

ಎಸ್​ಎಂವಿಟಿ ಬೆಂಗಳೂರು - ವಾಸ್ಕೊ ಎರಡು ಟ್ರಿಪ್​ಗಳ ಸ್ಪೇಷಲ್ ರೈಲು ಡಿ. 20 ಹಾಗೂ 22ರಂದು ಸಂಜೆ 6.15ಕ್ಕೆ ಬೆಂಗಳೂರಿನಿಂದ ಹೊರಟು, ಮಾರನೇ ದಿನ ಬೆಳಗ್ಗೆ 8.45ಕ್ಕೆ ವಾಸ್ಕೊ ತಲುಪಲಿದೆ. ಮರಳಿ ಡಿ. 21 ಹಾಗೂ 23ರಂದು ಬೆಳಗ್ಗೆ 10 ಗಂಟೆಗೆ ವಾಸ್ಕೊನಿಂದ ಹೊರಡುವ ರೈಲು, ಅದೇ ದಿನ ರಾತ್ರಿ 11.55ಕ್ಕೆ ಬೆಂಗಳೂರು ತಲುಪಲಿದೆ.

ಮತ್ತೊಂದು ರೈಲು ಎಸ್​ಎಂವಿಟಿ ಬೆಂಗಳೂರು- ವಾಸ್ಕೊ ಒಎಕ್ಸ್​ಪ್ರೆಸ್ ಸ್ಪೇಷಲ್ ನ್ ಟ್ರಿಪ್ ರೈಲು ಡಿ. 24ರಂದು ಡಿ. 24ರಂದು ರಾತ್ರಿ 8.30ಕ್ಕೆ ಬೆಂಗಳೂರಿನಿಂದ ಹೊರಟು, ಮಾರನೇ ದಿನ ಮಧ್ಯಾಹ್ನ 12 ಗಂಟೆಗೆ ವಾಸ್ಕೊ ತಲುಪಲಿದೆ. ಮರು ದಿಕ್ಕಿನಲ್ಲಿ ವಾಸ್ಕೊ- ಬೆಂಗಳೂರು ಎಕ್ಸ್​ಪ್ರೆಸ್ ಸ್ಪೇಷಲ್ ರೈಲು ವಾಸ್ಕೊದಿಂದ ಡಿ. 29ರ ಮಧ್ಯಾಹ್ನ 2.30ಕ್ಕೆ ಹೊರಟು, ಮಾರನೇ ದಿನ ಬೆಳಗಿನಜಾವ 5.15ಕ್ಕೆ ಬೆಂಗಳೂರು ತಲುಪಲಿದೆ.

ಡಿ. 30 ರಂದು ರಾತ್ರಿ 8.30ಕ್ಕೆ ಎಸ್​ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡುವ ಒನ್ ಟ್ರಿಪ್ ಎಕ್ಸ್​ಪ್ರೆಸ್ ಸ್ಪೇಷಲ್ ರೈಲು, ಮಾರನೇ ದಿನ ಮಧ್ಯಾಹ್ನ 12 ಗಂಟೆಗೆ ವಾಸ್ಕೊ ತಲುಪಲಿದೆ. ಮರಳಿ 2025ರ ಜ. 1ರಂದು ರಾತ್ರಿ 10 ಗಂಟೆಗೆ ವಾಸ್ಕೊದಿಂದ ಹೊರಡುವ ರೈಲು, ಮಾರನೇ ದಿನ ಮಧ್ಯಾಹ್ನ 12 ಗಂಟೆಗೆ ಎಸ್​ಎಂವಿಟಿ ಬೆಂಗಳೂರು ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net