

ಹುಬ್ಬಳ್ಳಿ : ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ಅನುಕೂಲತೆಗಾಗಿ ಎಸ್ಎಸ್ಎಸ್ ಹುಬ್ಬಳ್ಳಿ- ಕರ್ನಲ್ ಸಿಟಿ ಸ್ಟೇಶನ್ ಮಧ್ಯೆ 4 ಟ್ರಿಪ್ ವಿಶೇಷ ಕಾಯ್ದಿರಿಸದ ರೈಲು ಸಂಚಾರ ಪ್ರಾರಂಭಿಸಲಾಗಿದೆ.
ನ. 24, 25, 26 ಮತ್ತು 27ರಂದು ರಾತ್ರಿ 8.15ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 6 ಗಂಟೆಗೆ ಕರ್ನಲ್ ಸಿಟಿ ತಲುಪಲಿದೆ. ಮರಳಿ ನ. 25, 26, 27 ಮತ್ತು 28ರಂದು ಬೆಳಗ್ಗೆ 7.30ಕ್ಕೆ ಕರ್ನಲ್ನಿಂದ ಹೊರಡುವ ರೈಲು, ಅದೇ ದಿನ ಸಂಜೆ 4.15ಕ್ಕೆ ಹುಬ್ಬಳ್ಳಿ ತಲುಪಲಿದೆ.