ಅಯೋಧ್ಯೆ ರಾಮನ ದರ್ಶನಕ್ಕೆ ಮೈಸೂರಿನಿಂದ ವಿಶೇಷ ರೈಲು

Ramalalla 1
Published on

ಮೈಸೂರು: ಅಯೋಧ್ಯೆ ರಾಮ ಮಂದಿರ ವೀಕ್ಷಣೆ ಹಾಗೂ ರಾಮಲಲ್ಲಾನ ದರ್ಶನಕ್ಕೆ ಫೆ.17ರಂದು ಮೈಸೂರಿನಿಂದ ವಿಶೇಷ ರೈಲು ಹೊರಡಲಿದೆ ಎಂದು ಎಲ್.ಆರ್.ಮಹದೇವಸ್ವಾಮಿ ಮಾಹಿತಿ ನೀಡಿದರು.

ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯಿಂದ 1,330 ಜನ ರಾಮ ಭಕ್ತರು, ಪಕ್ಷದ ಕಾರ್ಯಕರ್ತರು, ಮುಖಂಡರು ವಿಶೇಷ ರೈಲು ಮೂಲಕ ಅಯೋಧ್ಯೆಗೆ ತೆರಳಲಿದ್ದಾರೆ.

ಇದಕ್ಕೆ ತಲಾ 3 ಸಾವಿರ ರೂ. ವೆಚ್ಚವಾಗಿಲಿದ್ದು, ಇಷ್ಟೂ ಹಣವನ್ನು ಅವರೇ ಭರಿಸಲಿದ್ದಾರೆ ಎಂದರು.

ಜಿಲ್ಲೆಯಾದ್ಯಂತ ಪ್ರತಿ ಬೂತ್‌ಗಳಲ್ಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ‘ಮತ್ತೊಮ್ಮೆ ಮೋದಿ -2024’ ಗೋಡೆಬರಹ ಬರೆಸುವ ಅಭಿಯಾನ ನಡೆಸಲಿದ್ದಾರೆ. ಪ್ರತಿ ಬೂತ್‌ನಲ್ಲೂ 5 ಕಡೆ ಮನೆಯವರ ಅನುಮತಿ ಪಡೆದು ಗೋಡೆ ಬರಹ ಬರೆಯಲಾಗುವುದು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net