ಹುಬ್ಬಳ್ಳಿ-ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲು

New Train
Published on

ಹುಬ್ಬಳ್ಳಿ : ಕರ್ನಾಟಕದಿಂದ ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆ ನಿಯಂತ್ರಣಕ್ಕಾಗಿ ನೈಋತ್ಯ ರೈಲ್ವೆಯು ಹುಬ್ಬಳ್ಳಿ -ಕೊಲ್ಲಂ ಮತ್ತು ಬೆಳಗಾವಿ-ಕೊಲ್ಲಂ ನಿಲ್ದಾಣಗಳ ಮಧ್ಯೆ ಆರು ಟ್ರಿಪ್ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದೆ.

ಎಸ್​ಎಸ್​ಎಸ್ ಹುಬ್ಬಳ್ಳಿ-ಕೊಲ್ಲಂ-ಎಸ್​ಎಸ್​ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್​ಪ್ರೆಸ್ ರೈಲು ಡಿ. 5 ರಿಂದ 2025ರ ಜನವರಿ 9ರವರೆಗೆ ಪ್ರತಿ ಗುರುವಾರ ಸಂಜೆ 5.30ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮಾರನೇ ದಿನ ಸಂಜೆ 4.30ಕ್ಕೆ ತಲುಪಲಿದೆ.

ಡಿ. 6 ರಿಂದ 2025ರ ಜನವರಿ 10ರವರೆಗೆ ಪ್ರತಿ ಶುಕ್ರವಾರ ಸಂಜೆ 6.30ಕ್ಕೆ ಕೊಲ್ಲಂನಿಂದ ಹೊರಡುವ ರೈಲು, ಮಾರನೇ ದಿನ ಹುಬ್ಬಳ್ಳಿ ತಲುಪಲಿದೆ.

ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಕಡೂರು, ಅರಸೀಕೆರೆ, ತುಮಕೂರು, ಎಸ್​ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ ಮತ್ತು ಕಾಯಂಕುಲಂ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಯಾಗಲಿದೆ.

ಬೆಳಗಾವಿ-ಕೊಲ್ಲಂ-ಬೆಳಗಾವಿ ವಿಶೇಷ ರೈಲು ಡಿ. 9 ರಿಂದ 2025ರ ಜನವರಿ 13ರವರೆಗೆ ಬೆಳಗಾವಿಯಿಂದ ಪ್ರತಿ ಸೋಮವಾರ ಮಧ್ಯಾಹ್ನ 2.30 ಕ್ಕೆ ಹೊರಟು, ಮಾರನೇ ದಿನ ಸಂಜೆ 4.30ಕ್ಕೆ ಕೊಲ್ಲಂ ತಲುಪಲಿದೆ.

ಡಿ. 10 ರಿಂದ 2025ರ ಜನವರಿ 14ರವರೆಗೆ ಕೊಲ್ಲಂನಿಂದ ಪ್ರತಿ ಮಂಗಳವಾರ ಸಂಜೆ 6.30 ಕ್ಕೆ ಹೊರಡುವ ಈ ರೈಲು, ಮಾರನೇ ದಿನ ರಾತ್ರಿ 10 ಗಂಟೆಗೆ ಬೆಳಗಾವಿ ತಲುಪಲಿದೆ.

ಈ ರೈಲು ಖಾನಾಪುರ, ಲೋಂಡಾ, ಧಾರವಾಡ, ಎಸ್​ಎಸ್​ಎಸ್ ಹುಬ್ಬಳ್ಳಿ, ಹಾವೇರಿ, ರಾಣೆಬೆೆನ್ನೂರು, ಹರಿಹರ, ದಾವಣಗೆರೆ, ಕಡೂರು, ಅರಸೀಕೆರೆ, ತುಮಕೂರು, ಎಸ್​ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ ಮತ್ತು ಕಾಯಂಕುಲಂ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net