ಕುಂಭಮೇಳಕ್ಕೆ ವಿಶೇಷ ರೈಲು

New Train
Published on

ಹುಬ್ಬಳ್ಳಿ : ಪ್ರಯಾಗ್​ರಾಜ್ ಕುಂಭಮೇಳಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಲಯವು ಹಾವೇರಿ, ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಮೈಸೂರು ಮತ್ತು ಉತ್ತರ ಪ್ರದೇಶದ ತುಂಡ್ಲಾ ಮಧ್ಯೆ ವಿಶೇಷ ಒಂದು ಟ್ರಿಪ್ ಎಕ್ಸ್​ಪ್ರೆಸ್ ರೈಲು ಸಂಚಾರ ಸೌಲಭ್ಯ ಕಲ್ಪಿಸಿದೆ.

ಫೆ. 20ರಂದು ರಾತ್ರಿ 9.40ಕ್ಕೆ ಮೈಸೂರಿನಿಂದ ಹೊರಡುವ ರೈಲು, 23ರಂದು ಬೆಳಗ್ಗೆ 9.30ಕ್ಕೆ ತುಂಡ್ಲಾ ತಲುಪಲಿದೆ. ಮರಳಿ ತುಂಡ್ಲಾ ನಿಲ್ದಾಣದಿಂದ ಫೆ. 24ರಂದು ಬೆಳಗ್ಗೆ 11.30ಕ್ಕೆ ಹೊಡುವ ರೈಲು, 26ರಂದು ರಾತ್ರಿ 10 ಗಂಟೆಗೆ ಮೈಸೂರು ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net