ಕುಂಭಮೇಳಕ್ಕೆ ವಿಶೇಷ ರೈಲು

indian_railway_660_122817022237_220320014032_180221022159
Published on

ಹುಬ್ಬಳ್ಳಿ : ಕುಂಭಮೇಳಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಮೈಸೂರು-ಲಖನೌ ಮಧ್ಯೆ ಒನ್ ವೇ ಸ್ಪೇಷಲ್ ಎಕ್ಸ್​ಪ್ರೆಸ್ ರೈಲು ಸಂಚಾರ ಪ್ರಾರಂಭಿಸಲಾಗಿದೆ.

ಫೆ. 14ರಂದು ಬೆಳಗ್ಗೆ 7.30ಕ್ಕೆ ಮೈಸೂರಿನಿಂದ ಹೊರಡುವ ಈ ರೈಲು, 16ರಂದು ಸಂಜೆ 4 ಗಂಟೆಗೆ ಲಖನೌ ತಲುಪಲಿದೆ. ಈ ರೈಲು ಮಂಡ್ಯ, ಕೆಎಸ್​ಆರ್ ಬೆಂಗಳೂರು, ತುಮಕೂರು, ಕಡೂರ, ರಾಣೆಬೆನ್ನೂರ, ಹಾವೇರಿ, ಎಸ್​ಎಸ್​ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಿರಜ, ಪುಣೆ ಮಾರ್ಗವಾಗಿ ಸಂಚರಿಸಲಿದೆ.

ಮೈಸೂರು-ತುಂಡ್ಲಾ : ಮತ್ತೊಂದೆಡೆ ಕುಂಭಮೇಳಕ್ಕೆ ಮೈಸೂರು-ಉತ್ತರ ಪ್ರದೇಶದ ತುಂಡ್ಲಾ ಮಧ್ಯೆ ಒಂದು ಟ್ರಿಪ್ ವಿಶೇಷ ಎಕ್ಸ್​ಪ್ರೆಸ್ ರೈಲು ಸಂಚಾರ ಪ್ರಾರಂಭಿಸಲಾಗಿದೆ.

ಮೈಸೂರಿನಿಂದ ಫೆ. 17ರಂದು ರಾತ್ರಿ 9.40ಕ್ಕೆ ಹೊರಡುವ ರೈಲು, 20ರಂದು ಬೆಳಗ್ಗೆ 9.30ಕ್ಕೆ ತುಂಡ್ಲಾ ತಲುಪಲಿದೆ.

ಮರಳಿ ತುಂಡ್ಲಾದಿಂದ ಫೆ. 21ರಂದು ಬೆಳಗ್ಗೆ 11.30ಕ್ಕೆ ಹೊರಟು, 23ರಂದು ರಾತ್ರಿ 10 ಗಂಟೆಗೆ ಮೈಸೂರು ತಲುಪಲಿದೆ.

ಮಂಡ್ಯ, ಕೆಎಸ್​ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಎಸ್​ಎಸ್​ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಮೀರಜ್, ಪುಣೆ ಮಾರ್ಗವಾಗಿ ಈ ರೈಲು ಸಂಚರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net