ಕುಂಭಮೇಳಕ್ಕೆ ವಿಶೇಷ ರೈಲು

Rail New
Published on

ಹುಬ್ಬಳ್ಳಿ : ಕುಂಭಮೇಳದ ಅಂಗವಾಗಿ ನೈಋತ್ಯ ರೈಲ್ವೆ ವಲಯವು ಎಸ್​ಎಸ್​ಎಸ್ ಹುಬ್ಬಳ್ಳಿ ಮತ್ತು ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಗಳ ಮಧ್ಯೆ ಎರಡು ವಿಶೇಷ ರೈಲು ಸಂಚಾರ ಪ್ರಾರಂಭಿಸಲಿದೆ.

ಎಸ್​ಎಸ್​ಎ ಹುಬ್ಬಳ್ಳಿ ನಿಲ್ದಾಣದಿಂದ ಜ. 19ರ ಭಾನುವಾರ ಮಧ್ಯರಾತ್ರಿ 12.45ಕ್ಕೆ ಹೊರಡುವ ರೈಲು, ಬುಧವಾರ ಬೆಳಗಿನಜಾವ 2.30ಕ್ಕೆ ತುಂಡ್ಲಾ ನಿಲ್ದಾಣ ತಲುಪಲಿದೆ. ಮರಳಿ ಜ. 23ರ ಗುರುವಾರ ಸಂಜೆ 4 ಗಂಟೆಗೆ ಹೊರಡುವ ರೈಲು, ಶನಿವಾರ ಸಂಜೆ 6.45ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

ಮತ್ತೊಂದು ರೈಲು ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಫೆ. 6 ರ ಗುರುವಾರ ರಾತ್ರಿ 8.10ಕ್ಕೆ ಹೊರಟು, ಶನಿವಾರ ರಾತ್ರಿ 8.15ಕ್ಕೆ ತುಂಡ್ಲಾ ನಿಲ್ದಾಣ ತಲುಪಲಿದೆ. ಮರಳಿ ತುಂಡ್ಲಾದಿಂದ ಫೆ. 9ರ ಭಾನುವಾರ ಸಂಜೆ 4.20ಕ್ಕೆ ಹೊರಟು, ಮಂಗಳವಾರ ಸಂಜೆ 4.40ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net