ಮಂಗಳೂರು- ಕೊಚುವೇಲಿ ವಿಶೇಷ ರೈಲು ಸಂಚಾರ

images
Published on

ಮಂಗಳೂರು : ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಮಂಗಳೂರು- ಕೊಚುವೇಲಿ ಮಾರ್ಗದಲ್ಲಿ ವಿಶೇಷ ರೈಲು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಮಂಗಳೂರು ಜಂಕ್ಷನ್-ಕೊಚುವೇಲಿ ಸ್ಪೆಷಲ್ ರೈಲು (ನಂ.06041) ಆ.3ರಂದು ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್‌ನಿಂದ
ಹೊರಡಲಿದ್ದು ಮರುದಿನ ಬೆಳಗ್ಗೆ 8ಕ್ಕೆ ಕೊಚುವೇಲಿ ತಲುಪಲಿದೆ.
ಕೊಚುವೇಲಿ -ಮಂಗಳೂರು ಜಂಕ್ಷನ್ ಸ್ಪೆಷಲ್ ರೈಲು (ನಂ.06042) ಆ.4ರಂದು ಸಾಯಂಕಾಲ 6.40ಕ್ಕೆ ಕೊಚುವೇಲಿಯಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 7 ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಈ ರೈಲು 8- ಸ್ಲೀಪರ್ ಕೋಚ್, 7-ಸೆಕೆಂಡ್ ಕ್ಲಾಸ್ ಜನರಲ್ ಕೋಚ್ ಮತ್ತು 2-ಸೆಕೆಂಡ್ ಕ್ಲಾಸ್ ಲಗ್ಗೇಜ್ ಕಂ ಬ್ರೇಕ್ ವ್ಯಾನ್ ಹೊಂದಿದೆ.
............

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net