ಬೇಸಿಗೆ ವಿಶೇಷ ರೈಲು ಸಂಚಾರ

Railways-Passenger-1200x720
Published on



ಮಂಗಳೂರು : ರೈಲ್ವೆ ಇಲಾಖೆಯು ಬೇಸಿಗೆ ರಜೆ ಸಂದರ್ಭ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಮಂಗಳೂರು ಸೆಂಟ್ರಲ್ ಮತ್ತು
ಕೊಯಮತ್ತೂರು ಜಂಕ್ಷನ್ ನಿಲ್ದಾಣದಿಂದ ವಾರಾಂತ್ಯದಲ್ಲಿ ವಿಶೇಷ ರೈಲು ಸಂಚಾರ ಆರಂಭಿಸಿದೆ.
ಮಂಗಳೂರು ಸೆಂಟ್ರಲ್ -ಕೊಯಮತ್ತೂರು ಜಂಕ್ಷನ್ ವೀಕ್ಲಿ ಸ್ಪೆಷಲ್ ರೈಲು (ನಂ.06041) ಮೇ 18, 25, ಜೂನ್ 1,8, 15, 22 ಮತ್ತು 29 ರಂದು ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಅದೇ ದಿನ ಸಾಯಂಕಾಲ 6.15ಕ್ಕೆ
ಕೊಯಮತ್ತೂರು ಜಂಕ್ಷನ್ ತಲುಪಲಿದೆ.
ಕೊಯಮತ್ತೂರು ಜಂಕ್ಷನ್-ಮಂಗಳೂರು ಸೆಂಟ್ರಲ್ ವೀಕ್ಲಿ ಸ್ಪೆಷಲ್ ರೈಲು (ನಂ.06042) ಮೇ 18, 25, ಜೂನ್ 1,8, 15, 22 ಮತ್ತು 29 ರಂದು ರಾತ್ರಿ 10.15ಕ್ಕೆ ಕೊಯಮತ್ತೂರು ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಗ್ಗೆ 6.55ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. 19 ಸ್ಲೀಪರ್ ಕೋಚ್ ಮತ್ತು 2 ಸೆಕೆಂಡ್ ಕ್ಲಾಸ್ ಲಗ್ಗೇಜ್ /ಬ್ರೇಕ್ ವ್ಯಾನ್ ಬೋಗಿಗಳನ್ನು ಈ ರೈಲುಗಳಿಗೆ ಅಳವಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net