

ವಿಜಯಪುರ: ಪೇಜಾವರ ಮಠದ ಹಿಂದಿನ ಯತಿಗಳಾಗಿದ್ದ ಶ್ರಿ ವಿಶ್ವೇಶತೀರ್ಥರು ಬಡ ವಿಪ್ರ ಮಕ್ಕಳಿಗೆ ಉಚಿತ ಊಟ ಸಹಿತ ವಸತಿ ನಿಲಯ ಪ್ರಾರಂಭಿಸುವ ಮೂಲಕ ಲಾಂತರ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ವಿದ್ಯಾರ್ಥಿ ನಿಲಯವು ಅವರ ಕನಸಿನ ಕೂಸು. ಹೀಗಾಗಿ ಅವರು ಕಟ್ಟಿ ಬೆಳೆಸಿದ ಮಧ್ವ ಮಂಡಲಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥರು ಹೇಳಿದರು.
ನಗರದ ಶ್ರೀ ಕೃಷ್ಣ ವಾದಿರಾಜ ಮಠದಲ್ಲಿ ಮೂರು ದಿನ ಹಮ್ಮಿಕೊಂಡಿದ್ದ ವಿದ್ವತ್ವ ಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರಿಗಳು, ವಿಪ್ರ ಬಡ ವಿದ್ಯಾಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿ ವಸತಿ ನಿಲಯ (ಮಧ್ವಮಂಡಲ) ಸ್ಥಾಪಿಸುವ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ವಿಜಯಪುರದಲ್ಲಿ ವಸತಿ ನಿಲಯ ನಿರ್ಮಿಸಿ 50 ವರ್ಷಗಳಾಗಿದೆ. ಸಂಪೂರ್ಣ ಹಳೆಯದಾಗಿದ್ದು, ನಿಲಯ ಜೀಣೋದ್ಧಾರಗೊಳಿಸಿ ಆಧುನಿಕ ಸೌಲಭ್ಯಗಳ ಜತೆ ಸಂಸತಿ ಮತ್ತು ಆಧ್ಯಾತ್ಮಿಕ ಕೇಂದ್ರವನ್ನಾಗಿಸುವ ಸಂಕಲ್ಪ ಮಾಡಲಾಗಿದೆ ಎಂದರು.
ಕುಂಭಮೇಳ ಐತಿಹಾಸಿಕ ಕ್ಷಣ. 60 ಕೋಟಿಗೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದಾರೆ. ಸನಾತನ ಪರಂಪರೆಯ ಪ್ರತಿಬಿಂಬವಾಗಿದೆ. ಗಂಗೆಯಲ್ಲಿ ಮಿಂದರೆ ಏನು ಪ್ರಯೋಜನ? ಎಂದು ಕೇಳುವವರೂ ಇರುತ್ತಾರೆ. ಅದು ಅವರವರ ನಂಬಿಕೆ. ಬಲವಂತವಾಗಿ ಯಾರನ್ನು ಕುಂಭ ಸ್ನಾನಕ್ಕೆ ಕರೆದುಕೊಂಡು ಹೋಗಿಲ್ಲ. ಸ್ವ ಇಚ್ಛೆಯಿಂದ ಅಪಾರ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ಕೇವಲ ಭಾರತೀಯರು ಮಾತ್ರವಲ್ಲ. ವಿದೇಶಿಗರು ಆ ಸುಂದರ ಕ್ಷಣಕ್ಕೆ ಸಾಯಾಗಿದ್ದಾರೆ ಎಂದರು.
ಕೃಷ್ಣ ವಾದಿರಾಜ ಮಠದ ವ್ಯವಸ್ಥಾಪಕ ಪಂ. ವಾಸುದೇವಾಚಾರ್ಯ ಅಗ್ನಿಹೋತ್ರಿ ಮಾತನಾಡಿ, ಪೇಜಾವರ ಮಠದ ಹಿರಿಯ ಸ್ವಾಮಿಗಳು ಐದು ದಶಕಗಳ ಹಿಂದೆ ಬ್ರಾಹ್ಮಣ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಜಿಲ್ಲೆಯ ಬಡ ವಿಪ್ರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಮಕ್ಕಳನ್ನು ಓದಿಸಲಾಗದಷ್ಟು ಬಡತನವಿದ್ದ ಸಂದರ್ಭದಲ್ಲಿ ಪ್ರತಿ ಜಿಲ್ಲೆಗೊಂದು ವಸತಿ ನಿಲಯ ಸ್ಥಾಪಿಸಿ ಲಾಂತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಪ್ರಸ್ತುತ ಪೀಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥರು ವಿದ್ಯಾರ್ಥಿನಿಯಗಳ ಜೀಣೋದ್ಧಾರಕ್ಕೆ ಕ್ರಮ ಕೈಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ನೂತನ ಕಟ್ಟಣ ನಿರ್ಮಾಣಕ್ಕೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸುಮಾರು ಏಳು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವಸತಿ ನಿಲಯ ನಿರ್ಮಾಣಕ್ಕೆ ಕ್ಷಣಗಣನೆ ಶುರುವಾಗಿದೆ. ಆಸಕ್ತ ಭಕ್ತರು ಸಹಾಯ ಮಾಡಬೇಕು ಎಂದು ಅವರು ಕೋರಿದರು.
ಹಿರಿಯ ವಿದ್ವಾಂಸರಾದ ಪಂ. ಮಧ್ವಾಚಾರ್ಯ ಮೊಕಾಶಿ, ಪಂ.ರೂತ್ತಮಾಚಾರ್ಯ ನಾಗಸಂಪಗಿ, ಪಂ.ನರಹರಿ ಆಚಾರ್ಯರು ಪ್ರವಚನ ನೀಡಿದರು.
ಕೃಷ್ಣ ವಾದಿರಾಜ ಮಠದ ಅಧ್ಯಕ್ಷ ಡಾ. ಕಿರಣ ಚುಳಕಿ, ಗೌರವಾಧ್ಯಕ್ಷ ಗೋಪಾಲ ನಾಯಕ, ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ವಿಕಾಸ ಪದಕಿ, ಅಶೋಕರಾವ, ವಿ.ವಿ.ಕುಲಕರ್ಣಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.