ಹೆಣ್ಣಿಗೆ ವಿಶೇಷ ಗೌರವ, ಸ್ಥಾನಮಾನ

nrp kasapa
ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಡಾ. ಮೇರಿಸೂಸನ್ನ ಉದ್ಘಾಟಿಸಿದರು. ಎಚ್.ಎಸ್.ಪೂರ್ಣೇಶ್, ಭಾಗ್ಯಾ ನಂಜುಂಡಸ್ವಾಮಿ, ಜುಬೇದಾ, ಸಿಸ್ಟರ್ ಜೆಸಿಲಿನ್, ಸಿಸ್ಟರ್ ನೋಯಲ್, ಕೆ.ಎಸ್.ರಾಜಕುಮಾರ್, ಜಯಮ್ಮ, ಪಿ.ಸಿ. ಮ್ಯಾಥ್ಯು ಇತರರಿದ್ದರು.
Published on

ಎನ್.ಆರ್.ಪುರ: ಉತ್ತಮ ಸಂಸ್ಕೃತಿ, ಸಂಸ್ಕಾರ ಹೊಂದಿರುವ ನಮ್ಮ ದೇಶದಲ್ಲಿ ಹೆಣ್ಣಿಗೆ ವಿಶೇಷ ಗೌರವ, ಸ್ಥಾನಮಾನವಿದೆ. ಆದರೂ ಹೆಣ್ಣು ಮಕ್ಕಳ ರಕ್ಷಣೆ ಮಾಡದಂತಹ ಸ್ಥಿತಿ ತಲುಪಿದ್ದೇವೆ ಎಂದು ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ ಬೇಸರ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಹದಿಹರೆಯದ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಉಪನ್ಯಾಸ ನೀಡಿದ ಅವರು, ಭಾರತ ಅಭಿವೃದ್ಧಿ ಹೊಂದಿದೆ. ಮಹಿಳೆಯರಿಗೆ ಶಿಕ್ಷಣ ಸಿಕ್ಕಿದೆ. ಆದರೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮುಂದುವರಿದಿರುವುದು ವಿಷಾದನೀಯ ಎಂದರು.

19 ವರ್ಷದವರೆಗೆ ಯುವತಿಯರ ಮನಸ್ಸು ಚಂಚಲವಾಗಿರುತ್ತದೆ. ನಂತರ ಮನಸ್ಸು ಸ್ವಲ ಹತೋಟಿಗೆ ಬರುತ್ತದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಯುವತಿಯರಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಸಲಹೆ ನೀಡಿದರು.
ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾದ್ಯಂತ ಕನ್ನಡ ಬೆಳೆಸುತ್ತಿದೆ. ಜಾತಿ, ಮತ ಭೇದವಿಲ್ಲದೆ ಕನ್ನಡದ ಮನಸ್ಸುಗಳು ಒಂದಾಗಿ ಕನ್ನಡದ ತೇರನ್ನು ಎಳೆಯಲಾಗುತ್ತಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕಸಾಪ ನಡಿಗೆ ಹಳ್ಳಿಯ ಕಡೆಗೆ ಎಂಬ ಘೋಷಣೆಯೊಂದಿಗೆ ಹಲವು ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಿ ಅಲ್ಲಿನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು.
ಕಸಾಪ ಹೋಬಳಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಕಸಾಪ ಕನ್ನಡದ ಜತೆಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಪುಷ್ಪಾ ಆಸ್ಪತ್ರೆಯ ಡಾ. ಮೇರಿಸೂಸನ್ನ, ಆಡಳಿತಾಧಿಕಾರಿ ಸಿಸ್ಟರ್ ಜೆಸಿಲಿನ್, ತರಬೇತಿ ಮೇಲ್ವಿಚಾರಕಿ ಸಿಸ್ಟಿರ್ ನೋಯಲ್, ತಾಲೂಕು ಕಸಾಪ ಕೋಶಾಧಿಕಾರಿ ಕೆ.ಎಸ್.ರಾಜಕುಮಾರ್, ಸಾಹಿತಿ ಜಯಮ್ಮ, ಪಿ.ಸಿ.ಮ್ಯಾಥ್ಯೂ, ದರ್ಶನ್, ಭಾನುಮತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net