ರಾಜಕೀಯದಲ್ಲಿ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ

womens day
Published on

ಕೋಲಾರ: ಸಮತೋಲಿತ ಮತ್ತು ಪ್ರಾತಿನಿಧಿಕ ಸಮಾಜಕ್ಕೆ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಅಗತ್ಯ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರಿಗೆ ರಾಜಕೀಯದಲ್ಲಿ ಸಮಾನ ಪ್ರಾತಿನಿಧ್ಯ ಖಚಿತಪಡಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ದೆಹಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತ ಅವರನ್ನು ಆಯ್ಕೆ ಮಾಡಿರುವುದೇ ನಿದರ್ಶನ. ಬಿಜೆಪಿ ಕಟ್ಟಿ ಬೆಳೆಸುವ ಪ್ರಕ್ರಿಯೆಗಳಲ್ಲಿ ಮಹಿಳೆಯರು ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು, ಮತ್ತು ಅವರ ರಾಜಕೀಯ ಭಾಗವಹಿಸುವಿಕೆಗೆ ಅಡ್ಡಿಯಾಗುವ ಅಡೆತಡೆ ನಿವಾರಿಸುವುದು ಮೋದಿ ಅವರ ಹಾಗೂ ಬಿಜೆಪಿ ನಾಯಕರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿಯೂ ಸಹ ಪಕ್ಷ ಕಟ್ಟಲು ಮಹಿಳಾ ಪದಾಧಿಕಾರಿಗಳಿಗೆ ಎಲ್ಲ ಶಕ್ತಿ ನೀಡಿ ಬಲಿಷ್ಠವಾಗಿ ಮಾಡಲಾಗುತ್ತಿದೆ. ದೇಶಕ್ಕೆ, ರಾಜ್ಯಕ್ಕೆ ಏಕೈಕ ಹೋರಾಟ ಶಕ್ತಿ ಕೇಂದ್ರ ಕೋಲಾರ ಜಿಲ್ಲೆಯಾಗಿದ್ದು, ಇಲ್ಲಿಯೂ ಮಹಿಳೆಯರ ಪಾತ್ರ ವಿಶೇಷ. ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಿದ್ದು, ವೇಮಗಲ್​-&ಕುರುಗಲ್​ ಪಟ್ಟಣ ಪಂಚಾಯಿತಿಯಲ್ಲಿ ನಾಲ್ಕು ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಅರುಣಮ್ಮ ಮಾತನಾಡಿ, ಪ್ರಧಾನ ಮಂತ್ರಿ ಅವರು ಹೆಣ್ಣು ಮಕ್ಕಳಿಗೆ ಶಕ್ತಿ ತುಂಬಲು ಹಾಗೂ ಸ್ವಶಕ್ತಿಯಿಂದ ಬದುಕಲು ಹಲವು ಯೋಜನೆಗಳನ್ನು ನೀಡಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಂಡು ಅನೇಕ ಮಹಿಳೆಯರು ತಮ್ಮ ಕುಟುಂಬವನ್ನು ನಿರ್ವಹಿಸುವ ಜತೆಗೆ ಆತ್ಮವಿಶ್ವಾಸದಿಂದ ಬದುಕನ್ನು ನಡೆಸುತ್ತಿದ್ದಾರೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉಷಾ ಗಂಗಾಧರ್​, ಡಾ.ರಾಧಿಕಾ, ಸರೋಜಾ, ನಾಗವೇಣಿ, ಮಾನಸ, ಕೆ.ಎನ್​.ಅನುರಾಧ ಅವರನ್ನು ಸನ್ಮಾನಿಸಲಾಯಿತು.

ಮುಖಂಡ ಶಿವಕುಮಾರ್​, ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಮಮತಾ, ಸವಿತಾ, ಪುಷ್ಪಲತಾ, ಗೌರಮ್ಮ, ಸೌಮ್ಯಾ, ಅನಿತಾ ನಾಗರಾಜ್​, ಗಜಲಕ್ಷಿ$್ಮ, ರತ್ನಕ್ಕ, ಪದ್ಮಾ, ಭಾಗ್ಯಾ, ಲಕ್ಷಿ$್ಮ, ನಾಗವೇಣಿ, ಮಾನಸ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net