

| ರವಿ ಗೋಸಾವಿ ಬೆಳಗಾವಿ
ಇದು ಆನ್ಲೈನ್ ಶಿಕ್ಷಣದ ಮತ್ತೊಂದು ‘ಸೈಡ್ ಎಫೆಕ್ಟ್’. ಪಾಠದ ಹೆಸರಿನಲ್ಲಿ ಅಪ್ಪ, ಅಮ್ಮಂದಿರ ಮೊಬೈಲ್ ಪಡೆದು ಸಾಮಾಜಿಕ ಜಾಲತಾಣದಲ್ಲಿ ಇಣುಕಿ ನೋಡುವ ಅಪ್ರಾಪ್ತ ಮಕ್ಕಳಿಗೆ ಅಶ್ಲೀಲ ವೆಬ್ಸೈಟ್ಗಳು ಬಲೆ ಹಾಕುತ್ತಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಇಂತಹ ಅನೇಕ ಪ್ರಕರಣಗಳು ಸೈಬರ್ ಕ್ರೖೆಂ ಐಟಿ ಆಕ್ಟ್ ಅಡಿ ಬೆಂಗಳೂರಿನ ಸಿಐಡಿ ಪೊಲೀಸರಿಂದ ದಾಖಲಾಗಿವೆ. ಕೃತ್ಯ ಜರುಗಿದ ಲೊಕೇಷನ್ ಆಧಾರದಲ್ಲಿ ಆಯಾ ಜಿಲ್ಲೆಗಳ ಸಿಇಎನ್ ಪೊಲೀಸ್ ಠಾಣೆಗಳಿಗೆ ಪ್ರಕರಣಗಳನ್ನು ವರ್ಗಾಯಿಸಲಾಗಿದೆ. ಸ್ಥಳೀಯ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆ ನಡೆಸುತ್ತಿದ್ದಾರೆ.
ಬಲೆಗೆ ಬಿದ್ದವರೆಷ್ಟೋ?: ಕರೊನಾ ಸಮಯದಲ್ಲಿ ಅನೇಕ ವಿದ್ಯಾರ್ಥಿಗಳು ಈ ಜಾಲಕ್ಕೆ ಬಿದ್ದಿದ್ದಾರೆ. ಆಮಿಷಗಳಿಗೆ ತಕ್ಕಂತೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ಸಂಬಂಧ ಬೆಳಗಾವಿಯ ಅಶೋಕ ನಗರ, ಆಜಾದ್ಗಲ್ಲಿ ಹಾಗೂ ಹಿರೇಬಾಗೇವಾಡಿಯ ಹಲವರು ಸೇರಿ ರಾಜ್ಯಾದ್ಯಂತ ಅನೇಕ ಮಂದಿ ಜೈಲು ಸೇರಿದ್ದಾರೆ.
ಡೈರೆಕ್ಟ್ ಮೀಟಿಂಗ್!: ಮಹಿಳೆಯರೇ ಈ ಜಾಲದ ಗ್ರಾಹಕರು. ಅವರ ಬೇಡಿಕೆ ಪೂರೈಸುವುದರ ಜತೆಗೆ ಸದಸ್ಯತ್ವಕ್ಕಾಗಿ 1,150 ರೂ. ಪಾವತಿಸಿಕೊಳ್ಳುತ್ತಾರೆ. ಸ್ಟಾರ್ ಹೋಟೆಲ್ಗಳಲ್ಲಿ ಅವರನ್ನು ಭೇಟಿಯಾಗುವ ‘ಪ್ಲೇ ಬಾಯ್’ ಗಳಿಗೆ ಸಂಬಳದ ಜತೆಗೆ ಭಕ್ಷೀಸ್ ನೀಡುತ್ತಾರೆ. ಫೇಸ್ಬುಕ್, ವಾಟ್ಸ್ ಆಪ್ ಹಾಗೂ ಟೆಲಿಗ್ರಾಮ್ ಮೂಲಕ ನ್ಯಾಷನಲ್ ಎಸ್ಕಾರ್ಟ್ ಸರ್ವಿಸ್ನಿಂದ ನಿಗದಿತ ಅಶ್ಲೀಲ ಸೈಟ್ ಮೂಲಕ ಹಿಂದಿಯಲ್ಲಿ ಕಾರ್ಯವೈಖರಿ ಕುರಿತು ವಿವರಿಸಲಾಗುತ್ತದೆ. ಪ್ರತಿ ಜಿಲ್ಲೆಯಲ್ಲೂ ಈ ಜಾಲ ಸಕ್ರಿಯವಾಗಿದ್ದು, ಗಡಿ ಭಾಗದ ಬೆಳಗಾವಿಯಲ್ಲಿ ಓರ್ವ ಯುವತಿ ಫೇಸ್ಬುಕ್ ಖಾತೆಯಿಂದ ಈ ಕಾರ್ಯ ನಿರ್ವಹಿಸುತ್ತಿದ್ದಾಳೆ.
ವೆಬ್ಸೈಟ್ ಬ್ರೌಸ್ ಮಾಡಿದ್ದರೆ ಮಾತ್ರ ನೋಟಿಫಿಕೇಷನ್ ಬರಲು ಸಾಧ್ಯ. ಅಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಅಥವಾ ವೈಯಕ್ತಿಕ ಮಾಹಿತಿ ನೀಡುವುದು ಸುರಕ್ಷಿತವಲ್ಲ. ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಪಾಲಕರು ಎಚ್ಚರ ವಹಿಸಬೇಕು. | ಲಕ್ಷ್ಮಣ ನಿಂಬರಗಿ ಪೊಲೀಸ್ ವರಿಷ್ಠಾಧಿಕಾರಿ, ಬೆಳಗಾವಿ ಮನೆಯಲ್ಲಿನ ದೊಡ್ಡವರು ಈ ಹಿಂದೆ ಬ್ರೌಸ್ ಮಾಡಿದ್ದರೆ, ಅದೇ ಫೋನ್ ಮಕ್ಕಳ ಬಳಿ ಇದ್ದರೆ ನೋಟಿಫಿಕೇಷನ್ ಬಂದು ಸಹಜವಾಗಿ ಅವರು ಲಿಂಕ್ ಕ್ಲಿಕ್ ಮಾಡುತ್ತಾರೆ. ಬಳಿಕ ಅವರು ಅಶ್ಲೀಲ ಚಟುವಟಿಕೆಯ ಆಮಿಷಕ್ಕೊಳಗಾಗುತ್ತಿದ್ದಾರೆ. | ಡಾ.ಸೋನಾಲಿ ಸನೋಬತ್ ಮನೋವಿಜ್ಞಾನ ತಜ್ಞೆ, ಬೆಳಗಾವಿ
‘ಇಂಡಿಯನ್ ನ್ಯಾಷನಲ್ ಎಸ್ಕಾರ್ಟ್ ಸರ್ವಿಸ್’ ಅನೈತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರಿಗೆ ಸಂಬಳ ನಿಗದಿ ಪಡಿಸಿದೆ. ಸದಸ್ಯತ್ವಕ್ಕೂ ಹಣ ಪಡೆಯುವ ಮೂಲಕ ಸರ್ವಿಸ್ ಖಾತ್ರಿ ಎನ್ನುತ್ತಿದ್ದಾರೆ. ಹೀಗಾಗಿ ಯುವಕರ ಜತೆ ಅಪ್ರಾಪ್ತರೂ ಸಹ ‘ಪ್ಲೇ ಬಾಯ್’ ಪ್ರತಿನಿಧಿಗಳಾಗತೊಡಗಿದ್ದಾರೆ.