ತೊಗರ್ಸಿ ಮಲ್ಲಿಕಾರ್ಜುನಸ್ವಾಮಿಗೆ ವಿಶೇಷ ಪೂಜೆ

4 ಎಸ್ಕೆಪಿ 1d
ಅಲಂಕೃತಗೊಂಡ ಶ್ರೀ ಮಲ್ಲಿಕಾರ್ಜುನ ಸ್ವಾಮಿ.
Published on

ಶಿಕಾರಿಪುರ: ತಾಲೂಕಿನ ಶ್ರೀಕ್ಷೇತ್ರ ತೊಗರ್ಸಿಯಲ್ಲಿ ಶ್ರಾವಣ ಸೋಮವಾರದ ನಿಮಿತ್ತ ಶ್ರೀ ಮಲ್ಲಿಕಾರ್ಜುನಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಸಲ್ಲಿಸಲಾಯಿತು.

ಮಳೆ ಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಅಭಿನವ ಮಹಾಂತ ಸ್ವಾಮೀಜಿಗಳು ಧಾರ್ಮಿಕ ಕೈಂಕರ್ಯದ ನೇತೃತ್ವ ವಹಿಸಿದ್ದರು. ಪುಟ್ಟಯ್ಯ ಶಾಸ್ತ್ರಿ, ಅರ್ಚಕರಾದ ಬಸವರಾಜ್ ಪೂಜಾರ್, ಸತೀಶ್ ಪೂಜಾರ್ ಇದ್ದರು.
ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ಪ್ರಸಾದದ ವ್ಯವಸ್ಥೆ ಇರುತ್ತದೆ. ಭಕ್ತರು ಪ್ರಸಾದದ ಸೇವೆ ವಹಿಸಿಕೊಂಡಿರುತ್ತಾರೆ. ಶ್ರಾವಣ ಮಾಸದ ಕೊನೆಯ ಸೋಮವಾರದ ದಾಸೋಹದ ಸೇವೆಯನ್ನು ಕೊಳಗಿ ಮತ್ತು ಹೊಸಕವಲಿ ಗೆಳೆಯರ ಬಳಗದ ಯುವಕರು ವಹಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net