

ರಿಪ್ಪನ್‌ಪೇಟೆ: ಹೊಂಬುಜ ಜೈನ ಮಠದಲ್ಲಿ ಶ್ರಾವಣ ಮಾಸದ ಪ್ರಥಮ ಸಂಪತ್ ಶುಕ್ರವಾರದ ಅಂಗವಾಗಿ ಶ್ರೀ ಪದ್ಮಾವತಿ ದೇವಿ ಸನ್ನಿಽಯಲ್ಲಿ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. ದೇವಿಗೆ ವಿವಿಧ ರೀತಿಯ 108 ಫಲ-ಧಾನ್ಯಗಳನ್ನು ಸಮರ್ಪಿಸಲಾಯಿತು. ಭಕ್ತರು ನೀಡಿದ ಸಮರ್ಪಣೆಯಿಂದ ದೇವಿ ಪ್ರಸನ್ನಳಾಗುವಳೆಂಬ ನಂಬಿಕೆ ಕ್ಷೇತ್ರದಲ್ಲಿದೆ. ಎಲ್ಲರಿಗೂ ಸುಜ್ಞಾನ, ಸಮೃದ್ಧಿ ಕರುಣಿಸಲಿ ಎಂದು ಸ್ವಾಮೀಜಿ ಆಶೀರ್ವದಿಸಿದರು.