ಶ್ರೀ ತ್ರಿಪುರ ಸುಂದರಿ ದೇವಿಗೆ ವಿಶೇಷ ಪೂಜೆ ಇಂದು

20220519_120523
Special Puja to Shri Tripura Sundari Devi today
Published on

ಮೂಗೂರು: ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದಲ್ಲಿ ಆಷಾಢ ಮಾಸದ ವಿಶೇಷ ಪೂಜಾ ಕಾರ್ಯಕ್ರಮ ಜು.19ರ ಶುಕ್ರವಾರದಂದು ನಡೆಯಲಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ಮಾಸದ ಎರಡನೇ ಶುಕ್ರವಾರ ವಿಶೇಷ ಪೂಜೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಹಳೆಯ ಮೈಸೂರು ಭಾಗದ ಧಾರ್ಮಿಕ ಕ್ಷೇತ್ರದಲ್ಲೊಂದಾದ ಶ್ರೀ ತ್ರಿಪುರ ಸುಂದರಿ ಅಮ್ಮನವರ ಆಷಾಢ ಮಾಸದ ಹೂವಿನ ಸೀರೆ ಅಲಂಕಾರ ಹಾಗೂ ಶ್ರೀ ದೇಶೇಶ್ವರಸ್ವಾಮಿ ದೇಗುಲದ ಶ್ರೀ ಪಾರ್ವತಿ ಅಮ್ಮನವರ ವೀಳ್ಯದೆಲೆ ಸೀರೆ ಅಲಂಕಾರ ತನ್ನದೇ ಆದ ರೀತಿಯಲ್ಲಿ ವೈಶಿಷ್ಟ್ಯತೆಯನ್ನು ಪಡೆದುಕೊಂಡು ಕ್ಷೇತ್ರದ ಹಿರಿಮೆಯನ್ನು ಹೆಚ್ಚಿಸಿದೆ.

ಬೆಳಗ್ಗೆಯಿಂದಲೇ ಅಮ್ಮನ ಮೂರ್ತಿಗೆ ಹೂವಿನ, ಸೀರೆ ಅಲಂಕಾರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಮಹಿಳೆಯರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಾಲಯದ ಆವರಣದಲ್ಲಿ ಬೆಲ್ಲದಾರತಿ, ನಿಂಬೆ ಹಣ್ಣಿನ ಆರತಿ, ಸೋಗಲು ಸೇವೆಯನ್ನು ಸಲ್ಲಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net