ಶ್ರೀ ನಾರದಮುನಿ ಸ್ವಾಮಿಗೆ ವಿಶೇಷ ಪೂಜೆ

Untitled design (4)
ಶ್ರಾವಣ ಮಾಸದ ನಿಮಿತ್ತ ಶನಿವಾರ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದ ಶ್ರೀ ನಾರದಮುನಿ ಸ್ವಾಮಿಯ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಲಾಯಿತು.
Published on

ಹರಪನಹಳ್ಳಿ: ತಾಲೂಕಿನ ಚಿಗಟೇರಿ ಶ್ರೀ ನಾರದಮುನಿ ಸ್ವಾಮಿಗೆ ಶ್ರಾವಣ ಮಾಸದ ನಿಮಿತ್ತ ಶನಿವಾರ ವಿಶೇಷ ಪೂಜೆ ಸಲ್ಲಿಸಲಾಯಿತು.


ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀ ನಾರದಮುನಿ ಸ್ವಾಮಿ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶ್ರೀ ನಾರದಮುನಿ ಸೇವಾ ಟ್ರಸ್ಟ್ ಅಧ್ಯಕ್ಷ ಅಣಬೇರೂ ರಾಜಣ್ಣ, ಸದಸ್ಯರಾದ ಬಸವರಾಜಪ್ಪ, ವಡ್ಡಿನಹಳ್ಳಿ ಷಡಕಪ್ಪ, ಕಲ್ಪನಹಳ್ಳಿ ಬಸವಲಿಂಗಪ್ಪ, ಪಲ್ಲಗಟ್ಟಿ ನಾಗರಾಜ, ವೇದಮೂರ್ತಿ,ಅರ್ಚಕರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net